Advertisement

ಕಲಿತ ಶಾಲೆಗೆ ಸ್ಮಾಟ್ ಕ್ಲಾಸ್ ಉಪಕರಣ ವಿತರಿಸಿದ ಐಟಿ ಉದ್ಯೋಗಿ

04:24 PM Jan 04, 2022 | Team Udayavani |

ಗಂಗಾವತಿ: ಅಕ್ಷರ ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಂತೆ ಬಹುತೇಕರು ಉಪದೇಶ ನೀಡುವುದು ರೂಢಿಯಾಗಿದೆ.  ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ವಿರೇಶ ಮುಕ್ಕುಂದಿಯವರು ತಮ್ಮ ಮದುವೆಯಲ್ಲಿ ಗೆಳೆಯರು ಬಂಧುಗಳಿಂದ ಸ್ವೀಕರಿಸಿದ ಹಣ ಮತ್ತು ವೈಯಕ್ತಿಕ ಹಣ ಸೇರಿಸಿ ತಾವು ಕಲಿತ ಶಾಲೆಯ ವಿದ್ಯಾರ್ಥಿಳಿಗೆ ಅನುಕೂಲವಾಗಲೆಂದು ಸ್ಮಾಟ್ ಕ್ಲಾಸ್ ಡಿಜಿಟಲ್ ಬೋರ್ಡ್ ಹಾಗೂ ಇತರೆ ಉಪಕರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಐಟಿ ಉದ್ಯೋಗಿ ವಿರೇಶ ಮುಕ್ಕುಂದಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕ ಶಿಕ್ಷಕಿಯರಿರುತ್ತಾರೆ. ಅವರಿಗೆ ವೈಜ್ಞಾನಿಕವಾಗಿ ಕಲಿಸಲು ಸ್ಮಾಟ್ ಕ್ಲಾಸ್ ಇದ್ದರೆ ವಿದ್ಯಾರ್ಥಿಗಳು ಬದಲಾದ ಕಾಲಕ್ಕೆ ತಕ್ಕಂತೆ ವಿಷಯಗಳನ್ನು ಕಲಿಯಲು ಅನುಕೂಲವಾಗುತ್ತದೆ. ಶಾಲೆಗಳಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಉಪಕರಣ ಹಾಗೂ ಕಾಲಕಾಲಕ್ಕೆ ಬೋಧಕ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಸ್ಪರ್ಧೆ ಮಾಡಲು ಸಿದ್ಧಗೊಳಿಸಬೇಕು.  ಪ್ರಾಥಮಿಕ ಹಂತದಿAದಲೇ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ  ವಿದ್ಯಾಯನ್ನು ಕಲಿಸಬೇಕು. ಸರಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವವರು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಲು ನೆರವಾಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ವಿರೇಶ ಮುಕ್ಕುಂದಿಯವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next