Advertisement

Shock; ಕಾಂಗ್ರೆಸ್‌ಗೆ ಐಟಿ ಇಲಾಖೆ ಹೊಸ ನೋಟಿಸ್‌ ಜಾರಿ

12:19 AM Apr 01, 2024 | Team Udayavani |

ಹೊಸದಿಲ್ಲಿ: ಚುನಾವಣೆ ಸಮೀಪಿಸುತ್ತಿರುವಂತೆಯೇ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಒಂದರ ಮೇಲೊಂದರಂತೆ ಶಾಕ್‌ ನೀಡುತ್ತಲೇ ಇದೆ. 2014-15ರಿಂದ 2016-17 ಹಣಕಾಸು ವರ್ಷದ ತೆರಿಗೆ ಬಾಕಿ 1,745 ಕೋಟಿ ರೂ. ಪಾವತಿಸುವಂತೆ ಹೊಸದಾಗಿ ಐಟಿ ಇಲಾಖೆ ನೋಟಿಸ್‌ ನೀಡಿದೆ. ಈ ಮೂಲಕ ಕಾಂಗ್ರೆಸ್‌ಗೆ ಈವರೆಗೆ ಒಟ್ಟಾರೆ 3,567 ಕೋಟಿ ರೂ. ತೆರಿಗೆ ಬಾಕಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

2014-15ನೇ ಹಣಕಾಸು ವರ್ಷ ದಲ್ಲಿ 663 ಕೋಟಿ ರೂ., 2015-16ನೇ ಸಾಲಿನಲ್ಲಿ 664 ಕೋಟಿ ರೂ. ಮತ್ತು 2016-17 ಹಣಕಾಸು ವರ್ಷದಲ್ಲಿ 417 ಕೋಟಿ ರೂ. ತೆರಿಗೆ ಬಾಕಿ, ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಹೊಸದಾಗಿ ಕಾಂಗ್ರೆಸ್‌ಗೆ ನೋಟಿಸ್‌ ನೀಡಿದೆ. ಇತ್ತೀಚೆಗೆ 2017-18ರಿಂದ 2020-21 ಸಾಲಿನ ತೆರಿಗೆ ಬಾಕಿ, ಬಡ್ಡಿ ಮತ್ತು ದಂಡವಾಗಿ 1,823 ಕೋಟಿ ರೂ. ಪಾವತಿಸುವಂತೆ ನೋಟಿಸ್‌ ನೀಡಿತ್ತು.

ಐಟಿ ಇಲಾಖೆ ಆರಂಭಿಸಿರುವ ಮರು ಮೌಲ್ಯಮಾಪನ ಪ್ರಕ್ರಿಯೆಗೆ ತಡೆ ಕೋರಿ ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌  ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next