Advertisement
ಬೆಂಗಳೂರಿನಲ್ಲಿ(ಬಿಬಿಎಂಪಿ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ) ಈಗಾಗಲೇ ಶೇ.70 ರಷ್ಟು ಮಂದಿ ಕೋವಿಡ್ ಮೊದಲ ಡೋಸ್ ಪಡೆದಿದ್ದು, ಶೇ.20 ರಷ್ಟು ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. 10ರಲ್ಲಿ ಏಳು ಮಂದಿಗೆ ಮೊದಲ ಡೋಸ್, ಐವರಲ್ಲಿ ಒಬ್ಬರಿಗೆ ಎರಡನೇ ಡೋಸ್ ಪೂರ್ಣಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಇತರೆ ಮಹಾನಗರಗಳು/ ಮೆಟ್ರೋ ನಗರಗಳಿಗೆ ಪೈಕಿರಾಜಧಾನಿಯಲ್ಲಿಯೇ ಲಸಿಕೆ ಅಭಿಯಾನದ ಮೊದಲ ಮತ್ತು ಎರಡನೇ ಡೋಸ್‌ನ ಗುರಿ ಸಾಧನೆ ಹೆಚ್ಚಿದೆ.
ಬೆಂಗಳೂರಿನಲ್ಲಿ ಈವರೆಗೂ ಮೊದಲ ಮತ್ತು ಎರಡನೇ ಡೋಸ್ ಸೇರಿ ಒಟ್ಟು 93 ಲಕ್ಷ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ. ಆಗಸ್ಟ್ ಮೊದಲ ವಾರ ನಿತ್ಯ ಸರಾಸರಿ 80 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಮುಂದಿನ ವಾರದಲ್ಲಿ ಒಟ್ಟಾರೆ ವಿತರಿಸಲಾದ ಲಸಿಕೆ ಪ್ರಮಾಣ ಒಂದು ಕೋಟಿ ಡೋಸ್‌ಗೆ ಹೆಚ್ಚಲಿದೆ. ದೆಹಲಿ 1.1 ಕೋಟಿ ಡೋಸ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಒಂದು ಕೋಟಿ ಡೋಸ್ ವಿತರಿಸಿದ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ
Related Articles
1. ಮುಂಬೈ, ಪುಣೆ, ಚೆನ್ನೈ ಸೇರಿದಂತೆ ಇತರೆ ನಗರಗಳಿಗೆ ಹೋಲಿಸಿದರೆ ಲಸಿಕಾ ವಿತರಣಾ ಕೇಂದ್ರಗಳ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 700ಕ್ಕೂ ಅಧಿಕ ಲಸಿಕಾಕೇಂದ್ರಗಳಿವೆ.
2. ಬೆಂಗಳೂರಿನಲ್ಲಿ ಸರ್ಕಾರಿ ಲಸಿಕೆ ಕೇಂದ್ರಗಳಿಗಿಂತ ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳು ಹೆಚ್ಚು ಕಾರ್ಯಾಚರಣೆಯಲ್ಲಿವೆ. ಬೇರೆ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚುಖಾಸಗಿ ಲಸಿಕಾ ಕೇಂದ್ರಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.
3. ಲಸಿಕೆ ಅಭಿಯಾನವನ್ನು ನಗರಜಿಲ್ಲೆ ಆರೋಗ್ಯ ಇಲಾಖೆ,ಬಿಬಿಎಂಪಿ ವಿಭಾಗ ಮಾಡಿಕೊಂಡಿದ್ದು, ಜವಾಬ್ದಾರಿ ವಿಸ್ತರಣೆಯಾಗಿ ಅಭಿಯಾನ ವೇಗವಾಗಿ ನಡೆಯುತ್ತಿದೆ.
4. ನಗರಲ್ಲಿ ಟೆಕ್ಕಿಗಳ ಸಂಖ್ಯೆ ಹೆಚ್ಚಿದ್ದು, ಅಭಿಯಾನಕ್ಕೆಕೈಜೋಡಿಸಿದ್ದಾರೆ. ಜತೆಗೆ ಬಿಜೆಪಿ ಸರ್ಕಾರದ ಆಡಳಿತ ಹಿನ್ನೆಲೆ ಲಸಿಕೆ ದಾಸ್ತಾನು ಪೂರೈಕೆ, ಜನಪ್ರತಿನಿಧಿಗಳಿಂದ ಅಭಿಯಾನಕ್ಕೆ ಪ್ರೋತ್ಸಾಹ.
5. ಸೋಂಕು ಹೆಚ್ಚಿರುವ ನಗರ ಎಂದು ಬೆಂಗಳೂರನ್ನು ಗುರುತಿಸಿ ಹೆಚ್ಚಿನ ಪ್ರಮಾಣದ ಲಸಿಕೆ ಮೀಸಲಿಟ್ಟು, ಹಂಚಿಕೆ. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಕಾರ್ಯಚಟುವಟಿಕೆಗಳು.
Advertisement
ಇದನ್ನೂ ಓದಿ:ಅಫ್ಘಾನಿಸ್ತಾನದ 8ನೇ ನಗರ ತಾಲಿಬಾನ್ ವಶಕ್ಕೆ, ಸೈನಿಕರು, ಪೊಲೀಸರು ಉಗ್ರರಿಗೆ ಶರಣು!
2ನೇ ಅಲೆಯಲ್ಲಿ ಕುಖ್ಯಾತಿಗೊಳಗಾಗಿತ್ತುಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ (ಮೇ) ಇಡೀ ದೇಶದ ಮಹಾನಗರಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು (26 ಸಾವಿರ), ಸೋಂಕಿತರ ಸಾವು (375) ಬೆಂಗಳೂರಿನಲ್ಲಿ ವರದಿಯಾಗಿದ್ದವು. ಅಲ್ಲದೆ, ಸತತ ಒಂದು ತಿಂಗಳಿಗೂ ಅಧಿಕ ದಿನಗಳು ಅತಿ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳನ್ನು (ಮೂರು ಲಕ್ಷ) ಬೆಂಗಳೂರು ಹೊಂದಿತ್ತು. ಹೀಗಾಗಿ,ಕೋವಿಡ್ ಸೋಂಕು ರಾಷ್ಟ್ರರಾಜಧಾನಿ ಎಂಬ ಕುಖ್ಯಾತಿಗೆ ಗುರಿಯಾಗಿತ್ತು. ಸದ್ಯ ಲಸಿಕೆಯಲ್ಲಿ ಮುಂಚೂಣಿಯಲ್ಲಿದೆ.2ನೇ ಅಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಉಂಟಾದ ಹಾಸಿಗೆ ಕೊರತೆಯು ಕೂಡಾ ಜನರಲ್ಲಿ ಭಯ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಕಾರಣವಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಂಗಳೂರು ಲಸಿಕೆ ವಿತರಣೆಯಲ್ಲಿ ಇತರೆ ಮಹಾನಗರಗಳಿಗಿಂತ ಮುಂಚೂಣಿಯಲ್ಲಿದೆ. ನಿತ್ಯ ಒಂದು ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ವಿತರಣೆ ಮಾಡುವ ಸಾಮರ್ಥ್ಯ ಬಿಬಿಎಂಪಿ ಹೊಂದಿದೆ. ದಾಸ್ತಾನು ಲಭ್ಯವಾದರೆ ಶೀಘ್ರದಲ್ಲಿಯೇ ಶೇ.100 ರಷ್ಟು ಗುರಿ ಸಾಧನೆಯಾಲಿದೆ.
-ಡಿ.ರಂದೀಪ್, ಆರೋಗ್ಯ ವಿಶೇಷ ಆಯುಕ್ತ, ಬಿಬಿಎಂಪಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಶೇ.92 ರಷ್ಟು ಲಸಿಕೆ ಗುರಿ ಸಾಧನೆಯಾಗಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದು, ಹೆಚ್ಚಿನ ಜನರು ಆಗಮಿಸಿ ಲಸಿಕೆ ಪಡೆಯುತ್ತಿದ್ದಾರೆ.
-ಡಾ.ಸೈಯದ್ ಸಿರಾಜುದ್ದೀನ್ ಮದನಿ,
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ – ಜಯಪ್ರಕಾಶ್ ಬಿರಾದಾರ್