Advertisement

ಟೆಕ್ಕಿಗಳ ಅನುಕೂಲಕ್ಕೆ ಐಟಿ-ಬಿಟಿ ಕಾರಿಡಾರ್‌

06:41 AM Feb 19, 2019 | Team Udayavani |

ಬೆಂಗಳೂರು: ನಮ್ಮ ಮೆಟ್ರೋ, ಉಪನಗರ ರೈಲು, ಎಲಿವೇಟೆಡ್‌ ಕಾರಿಡಾರ್‌ ಜತೆಗೆ ಈಗ ಐಟಿ ಉದ್ಯೋಗಿಗಳ ಸುಗಮ ಸಂಚಾರಕ್ಕಾಗಿ “ಐಟಿ-ಬಿಟಿ ಕಾರಿಡಾರ್‌’ ಬರಲಿದೆ. 

Advertisement

ಐಟಿಪಿಎಲ್‌, ವೈಟ್‌ಫೀಲ್ಡ್‌ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ನೂರಾರು ಐಟಿ ಕಂಪನಿಗಳಿದ್ದು, ಲಕ್ಷಾಂತರ ಜನ ಅಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಐಟಿ ಹಬ್‌ನಲ್ಲಿ 125 ಕೋಟಿ ರೂ. ವೆಚ್ಚದಲ್ಲಿ ಕಾರಿಡಾರ್‌ ಅಭಿವೃದ್ಧಿಪಡಿಸಲು ಬಿಬಿಎಂಪಿ ಉದ್ದೇಶಿಸಿದ್ದು, ಈ ಸಂಬಂಧ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ನಿರ್ಧರಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಮೂರು ಕೋಟಿ ರೂ. ಮೀಸಲಿಟ್ಟಿದೆ.

ನಗರದ ವಿವಿಧ ಭಾಗಗಳಿಂದ ಈ ಐಟಿ ಹಬ್‌ಗ ತೆರಳಲು ನಿತ್ಯ ಉದ್ಯೋಗಿಗಳು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಕಳೆಯಬೇಕಾಗಿದೆ. ಪ್ರಸ್ತುತ ಬಸ್‌ ಹೊರತುಪಡಿಸಿದರೆ, ಬೇರೆ ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಆ ಮಾರ್ಗಕ್ಕೆ ಇಲ್ಲ. ಮೆಟ್ರೋ ಯೋಜನೆ ಇದ್ದರೂ, ಅದಕ್ಕೆ ಇನ್ನೂ ಹಲವು ವರ್ಷಗಳು ಸಮಯ ಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಾರಿಡಾರ್‌ ಮಹತ್ವ ಪಡೆದುಕೊಂಡಿದೆ.

ಇದಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮತ್ತು ಉಪ ರಸ್ತೆಗಳ ನಿರಂತರ ನಿರ್ವಹಣೆ, ಸುರಕ್ಷತೆ, ಗುಂಡಿಮುಕ್ತ ರಸ್ತೆ, ರಸ್ತೆ ಮಾರ್ಕಿಂಗ್‌, ರಿಫ್ಲೆಕ್ಟರ್‌ ಅವಳವಡಿಕೆ ಮತ್ತಿತರ ಕಾರ್ಯಗಳಿಗೆ ವಾರ್ಷಿಕ 142 ಕೋಟಿ ರೂ. ಒದಗಿಸಲಾಗಿದೆ. ರಸ್ತೆ ಮೇಲ್ಸೇತುವೆ, ಕೆಳಸೇತುವೆಗಳ ದುರಸ್ತಿ ಹಾಗೂ ವಾರ್ಷಿಕ ನಿರ್ವಹಣೆ ಕಾಮಗಾರಿಗಳಿಗೆ 50 ಕೋಟಿ ರೂ. ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next