Advertisement

ಐಟಿ ಬಿಟಿಯ ಹುಡುಗರೂ ಸೀಡ್‌ ಬಾಲ್‌ ಕಟ್ಟಿದರು …

03:48 PM May 22, 2017 | Team Udayavani |

ಉಡುಪಿ: ನವೀನ್‌ ಕಾಮತ್‌, ಅಶ್ವಿ‌ನ್‌, ರವಿ ತೇಜ, ಉಲ್ಲಾಸ್‌, ಸಂದೀಪ್‌ ಆಚಾರ್ಯ…… ಹೀಗೆ ಹತ್ತಾರು ಉತ್ಸಾಹಿ ಯುವಶಕ್ತಿಗಳು ವೃತ್ತಿಯಲ್ಲಿ ಐಟಿ ಎಂಜಿನಿಯರ್ಸ್‌. ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಿಗಳು. ಜತೆಗೆ ಉತ್ತಿಷ್ಠ ಭಾರತ ಸಂಘಟನೆಯ ಸದಸ್ಯರು. ಶನಿವಾರ ಮತ್ತು ರವಿವಾರದ ರಜಾ ದಿನಗಳಲ್ಲಿ ರಾಷ್ಟ್ರ, ಸಮಾಜ ಕಟ್ಟುವ ಕಾಯಕಕ್ಕೆ ಕೈಜೋಡಿಸುವ ಆಸಕ್ತಿ ಇದೆ. 

Advertisement

ಈ ಹಿನ್ನೆಲೆಯಲ್ಲೇ ರವಿವಾರ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಶ್ರೀಗಳ ಮುತುವರ್ಜಿಯಿಂದ ಸಂಘಟನೆ ಹಮ್ಮಿಕೊಂಡ ಲಕ್ಷ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ಯುವ ಪೀಳಿಗೆ ಬೆಳಗ್ಗಿನಿಂದಲೇ ಕೆಂಪು ಮಣ್ಣಿಗೆ ಗೋಮೂತ್ರ, ಗೋಮಯಗಳ ಮಿಶ್ರಣ ಮಾಡಿ ಅವುಗಳನ್ನು ಉಂಡೆ ಮಾಡಿ ಅವುಗಳ ನಡುವೆ ಹೊಂಗೆ, ಪನ್ನೇರಳೆ, ಅಳಲೆ, ಅಶ್ವತ್ಥ, ಅಂಟುವಾಳ ಮೊದಲಾದ ಬೀಜಗಳನ್ನಿಟ್ಟು ಸೀಡ್‌ ಬಾಲ್‌ ತಯಾರಿಯಲ್ಲಿ ಪಾಲ್ಗೊಂಡರು. ಸ್ಥಳೀಯ ಅನೇಕ ಭಕ್ತರೂ ಇದರಲ್ಲಿ ಸೇರಿಕೊಂಡರು. 

ಪ್ರಕೃತಿಯಲ್ಲಿ ಸಸ್ಯ ಸಮೃದ್ಧಿಗೆ ಈ ಸುಲಭ ಉಪಾಯಧಿದಿಂದ ರಾಜ್ಯದಲ್ಲಿ ಈ ವರ್ಷ ಒಂದು ಕೋಟಿ ಸೀಡ್‌ ಬಾಲ್‌ ತಯಾರಿಸುವ ಸಂಕಲ್ಪಕೈಗೊಂಡಿರುವ ಉತ್ತಿಷ್ಠ ಭಾರತ ಸಂಘಟನೆ ಉಡುಪಿಯಲ್ಲಿಯೂ ಲಕ್ಷ ಸೀಡ್‌ ಬಾಲ್‌ ತಯಾರಿಸಿ ಹಂಚುವ ಗುರಿ ಇರಿಸಿಕೊಂಡಿದೆ. ಪರಿಸರ ಪ್ರೇಮಿಗಳೂ ಆದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಅಭಿಯಾನಕ್ಕೆ ಚಾಲನೆ ನೀಡಿಧಿದರು. ಆ ಬಳಿಕ ಶ್ರೀ ವಿಶ್ವೇಶತೀರ್ಥರು ತಯಾರಿಸಿದ್ದ ಉಂಡೆಗಳನ್ನು ಆಸಕ್ತ ಭಕ್ತರಿಗೆ ವಿತರಿಸಿದರು. ನೀಲಾವರ ಗೋಶಾಲೆಯಲ್ಲಿ ಸದ್ಯದಲ್ಲೇ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬೀಜದುಂಡೆಗಳನ್ನು ತಯಾರಿಸಲಾಗುವುದು ಎಂದು ಕಿರಿಯ ಶ್ರೀ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next