Advertisement

ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿ ಐಟಿ ವಶಕ್ಕೆ

11:04 PM Dec 22, 2019 | Team Udayavani |

ಬೆಳಗಾವಿ: ಕಲ್ಕಿ ಭಗವಾನ್‌ಗೆ ಸೇರಿದ ನಗರದ 9 ಕಡೆಗಳಲ್ಲಿಯ ಜಾಗ ಹಾಗೂ ನಿವೇಶನಗಳನ್ನು ಗೋವಾ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಮುಟ್ಟುಗೋಲು ಹಾಕಿಕೊಂಡಿ ದ್ದಾರೆ. ಸದಾಶಿವನಗರ ಸೇರಿ 9 ಕಡೆಗಳಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಕೋಟ್ಯಂತರ ರೂ.ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬೆಲೆ ಬಾಳುವ ಜಮೀನು, ನಿವೇಶನಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ದಾಖಲಾತಿಗಳು ಯಾರ ಕಡೆ ಇವೆ ಎಂಬುದರ ಬಗ್ಗೆ ಪತ್ತೆ ಹಚ್ಚುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕಲ್ಕಿ ಭಗವಾನ್‌ ಹೆಸರಲ್ಲಿ ಸದಾ ಶಿವನಗರದ ಲ್ಲಿರುವ ಜಾಗದಲ್ಲಿ ಕಾರ್ಯಕ್ರಮ ಆಯೋಜಿ ಸಲಾಗಿತ್ತು. ಬಳಿಕ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಗವಾನ್‌ ನೇರ ದರ್ಶನ ಮೂಲಕ ಭಕ್ತರಿಗೆ ಸಂದೇಶ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next