Advertisement

ಸಂಜಯ ಮಿಶ್ರಾ, ಕೃಷ್ಣ ಕಲ್ಬುರ್ಗಿ ಕಚೇರಿ ಮೇಲೆ ಐಟಿ ದಾಳಿ

12:50 AM Jan 18, 2019 | |

ಹುಬ್ಬಳ್ಳಿ: ಇಲ್ಲಿನ ಬಿಗ್‌ ಮಿಶ್ರಾ ಸ್ವೀಟ್‌ ಮಾರ್ಟ್‌ ಮಾಲೀಕ ಸಂಜಯ ಮಿಶ್ರಾ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ಕೃಷ್ಣ ಕಲಬುರ್ಗಿ ಸೇರಿ ಇತರರ ನಿವಾಸ ಹಾಗೂ ಕಚೇರಿಗಳ ಮೇಲೆ ಗುರುವಾರ ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

Advertisement

ನಿಲಿಜಿನ್‌ ರಸ್ತೆಯಲ್ಲಿರುವ ಧಾರವಾಡ ಮಿಶ್ರಾ ಪೇಡಾ ಮತ್ತು ಆಹಾರ ಸಂಸ್ಕರಣ ಉದ್ಯಮದ ಕಚೇರಿ, ದೇಶಪಾಂಡೆ ನಗರ, ಗೋಕುಲ ರಸ್ತೆ ಹಾಗೂ ಚನ್ನಮ್ಮ ವೃತ್ತ ಸೇರಿ ಇತರೆಡೆ ಇರುವ ಮಿಶ್ರಾ ಪೇಡಾ ಮಳಿಗೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವೇಶ್ವರ ನಗರದಲ್ಲಿರುವ ಕಲುºರ್ಗಿ ಅಸೋಸಿಯೇಟ್‌ನ ಮಾಲೀಕ ರಿಯಲ್‌ ಎಸ್ಟೇಟ್‌ ಉದ್ಯಮಿ ಕೃಷ್ಣ ಕಲಬುರ್ಗಿ ಅವರ ನಿವಾಸ, ನ್ಯೂ ಕಾಟನ್‌ ಮಾರ್ಕೆಟ್‌ನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದು, ತಡರಾತ್ರಿವರೆಗೂ ಮನೆ, ಕಚೇರಿಗಳಲ್ಲಿ ದಾಖಲೆ ಪರಿಶೀಲಿಸಿದ್ದಾರೆ. ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಗೋವಾ, ಮಹಾರಾಷ್ಟ್ರ ರಾಜ್ಯದಲ್ಲಿ ಮಿಶ್ರಾ ಪೇಡಾ ವ್ಯವಹಾರ ಇರುವುದರಿಂದ ಅಲ್ಲಿಯೂ ದಾಳಿ ನಡೆದಿದೆ ಎನ್ನಲಾಗಿದೆ.

ಪೇಡಾ ಘಟಕದ ಮೇಲೂ ದಾಳಿ
ಧಾರವಾಡ: ವಿಶ್ವ ಪ್ರಸಿದಟಛಿ ಧಾರವಾಡ ಪೇಡಾ ಉತ್ಪಾದಕ ಸಂಸ್ಥೆಯಾಗಿರುವ ಸಂಜಯ ಮಿಶ್ರಾ ಪೇಡಾ ತಯಾರಿಕಾ ಘಟಕದ ಮೇಲೂ ಗುರುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಿಶ್ರಾ ಪೇಡಾ ವ್ಯಾಪಾರ ವಿಸ್ತರಿಸಿದ್ದ ಸಂಜಯ ಮಿಶ್ರಾ ಅವರ ಮನೆ ಸೇರಿ ಹೊರವಲಯದ ಕ್ಯಾರಕೊಪ್ಪದ ಫೇಡಾ ತಯಾರಿಕಾ ಘಟಕದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ. ಬಾಡಿಗೆ ಕಾರಿನಲ್ಲಿ ಬೆಳಗ್ಗೆಯೇ ಕಾರ್ಖಾನೆಗೆ ತೆರಳಿದ ಐಟಿ ಅಧಿಕಾರಿಗಳು ಸಂಜೆವರೆಗೆ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಲ್ಲಿ ಬಿಗ್‌ ಮಿಶ್ರಾ ಸ್ವೀಟ್‌ ಮಳಿಗೆ ರಾಜ್ಯಾದ್ಯಂತ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಜನಪ್ರಿಯತೆ ಗಳಿಸಿದೆ. ಅದರ ಜೊತೆಗೆ ಅನೇಕರು ಈ ವ್ಯಾಪಾರದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಕೆಲ ತಿಂಗಳಿನಿಂದ ಇವರ ಮೇಲೆ ನಿಗಾ ವಹಿಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ
ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next