Advertisement

ಸಿಬಿಐ ಬದಲು ಇ.ಡಿ. ದಾಳಿ

06:00 AM Nov 25, 2018 | |

ಹೈದರಾಬಾದ್‌:  ಕೇಂದ್ರದ ಮಾಜಿ ಸಚಿವ, ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸದ ವೈ.ಎಸ್‌.ಚೌಧರಿ ಅವರ ನಿವಾಸ ಹಾಗೂ ಅವರ ಮಾಲೀಕತ್ವದ ಸುಜನಾ ಗ್ರೂಪ್‌ ಆಫ್ ಇಂಡಸ್ಟ್ರೀಸ್‌ಗೆ ಸೇರಿದ ಕಚೇರಿಗಳ ಮೇಲೆ ಶುಕ್ರವಾರ ಹಾಗೂ ಶನಿವಾರ ಆದಾಯ ತೆರಿಗೆ ಇಲಾಖೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಜಂಟಿ ದಾಳಿ ನಡೆಸಿವೆ. ಜತೆಗೆ, ಅವರ ಬಳಿಯಿದ್ದ 6 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಯಾಂಕ್‌ ವಂಚನೆ ಪ್ರಕರಣ ಸಂಬಂಧ ನ.27ರಂದು ಹಾಜರಾ ಗುವಂತೆ ನೋಟಿಸ್‌ ಕೂಡ ನೀಡಲಾಗಿದೆ.

Advertisement

ಚೌಧರಿ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತರಾಗಿ ರುವುದರಿಂದ ಹಾಗೂ ಸಿಬಿಐಯನ್ನು ಆಂಧ್ರದೊಳಕ್ಕೆ ಕಾಲಿಡದಂತೆ ಇತ್ತೀಚೆಗೆ ನಾಯ್ಡು ನಿರ್ಬಂಧ ವಿಧಿಸಿದ್ದರಿಂದ, ಈಗ ಚೌಧರಿ ನಿವಾಸ, ಕಚೇರಿಗಳ ಮೇಲೆ ನಡೆದಿರುವ ದಾಳಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.  ಸುಜನಾ ಚೌಧರಿ ಎಂದೇ ಖ್ಯಾತಿಯಾಗಿರುವ ವೈ.ಎಸ್‌. ಚೌಧರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವರಾಗಿದ್ದರು. ಮಾರ್ಚ್‌ನಲ್ಲಿ ಟಿಡಿಪಿ, ಎನ್‌ಡಿಎ ಒಕ್ಕೂಟದಿಂದ ಹೊರಬಂದಿದ್ದರಿಂದ ಚೌಧರಿ ತಮ್ಮ ಸಚಿವ ಸ್ಥಾನ ತ್ಯಜಿಸಿದ್ದರು. ಅವರ ಮಾಲೀಕತ್ವದ ಸುಜನಾ ಗ್ರೂಪ್‌ ಆಫ್ ಇಂಡಸ್ಟ್ರೀಸ್‌ ಕಂಪನಿಯ ಕೆಲ ವ್ಯವಹಾರಗಳ ಬಗ್ಗೆ ಸಿಬಿಐ ಈ ಮೊದಲೇ ತನಿಖೆ ನಡೆಸುತ್ತಿದ್ದು ನ. 8 ರಂದು ನಾಯ್ಡು ಅವರು ಸಿಬಿಐಗೆ ಆಂಧ್ರ ಪ್ರದೇಶಕ್ಕೆ ಕಾಲಿಡದಿರುವಂತೆ ನಿರ್ಬಂಧ ಹೊರಡಿಸಿದ್ದರಿಂದ ಸುಜನಾ ಸಂಸ್ಥೆಯ ತನಿಖೆ ಇ.ಡಿ. ಹೆಗಲಿಗೆ ಬಂದಿವೆ. ಹಾಗಾಗಿ, ಈ ದಾಳಿಗಳು ನಡೆದಿವೆ ಎಂದೂ ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next