Advertisement

ಪರಶಿವನ ಪ್ರತಿರೂಪವೇ ಇಷ್ಟಲಿಂಗ

09:45 AM Jun 05, 2018 | Team Udayavani |

ಕಾಳಗಿ: ವೀರಶೈವ ಲಿಂಗಾಯತರು ಪ್ರತಿದಿನ ದೇಹವನ್ನೆ ದೇಗುಲ ಮಾಡಿ ಲಿಂಗವನ್ನೇ ಆರಾಧ್ಯ ದೈವವನ್ನಾಗಿಸಿ ಪರಶಿವನ ಪ್ರತಿರೂಪವಾದ ಇಷ್ಟಲಿಂಗ ಮಹಾಪೂಜೆ ಮಾಡಿದರೆ ಬರುವ ಅನಿಷ್ಟಗಳು ದೂರಾಗಿ ಇಷ್ಟಾರ್ಥಗಳು ಈಡೇರುತ್ತವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.

Advertisement

ತಾಲೂಕಿನ ಮಂಗಲಗಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಸೋಮವಾರ ಬೆಳಗ್ಗೆ ಅಧಿಕ ಮಾಸದ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರನ್ನುದ್ಧೇಶಿಸಿ ಆಶೀರ್ವಚನ ನೀಡಿದರು.

ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಮಂಗಲಗಿಯಲ್ಲಿ ಮೂರುದಿನಗಳ ಕಾಲ ವಾಸ್ತವ್ಯ ಮಾಡಿ, ಸಮಾಜದ ಜನರಲ್ಲಿ ಇಷ್ಟಲಿಂಗ ಮಹಾಪೂಜೆ ಮಹತ್ವ ತಿಳಿಸಿ, ಧರ್ಮಸಭೆಗಳ ಮೂಲಕ ಜನಜಾಗೃತಿ ಮೂಡಿಸುವಂತಹ ಪವಿತ್ರ ಕಾರ್ಯ ನಡೆಯುತ್ತಿದೆ. ಇದರ ಕೀರ್ತಿ ಡಾ| ಶಾಂತಸೋಮನಾಥ
ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದರು. 

ವೀರಶೈವ ಧರ್ಮವನ್ನು ಉತ್ಕೃಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಪಂಚಪೀಠಗಳು ಮಾಡಿವೆ. ಈ ಧರ್ಮದವರು ಹೆಸರಿಗಷ್ಟೇ ಲಿಂಗಪೂಜೆ ಮಾಡದೆ ಭಕ್ತಿಯಿಂದ ಗುರುದೀಕ್ಷೆ ಪಡೆದು ದಿನನಿತ್ಯ ಲಿಂಗಪೂಜೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಲಿಂಗವನ್ನು ಪ್ರತಿದಿನ ಧರಿಸುವುದರಿಂದ ದೇಹ ಶುದ್ಧಿ ಆಗುವುದರ ಜೊತೆಗೆ  ನಿಮ್ಮನ್ನು ಮುಟ್ಟಿದವರ ಜೀವನವೂ ಪವಿತ್ರವಾಗುತ್ತದೆ ಎಂದರು.
 
ಮಂಗಲಗಿ ಶಾಂತೇಶ್ವರ ಹಿರೇಮಠದ ಪೂಜ್ಯ ಡಾ| ಶಾಂತಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜಿರಟಿಗಿಯ ಮಡಿವಾಳ ಶಾಸ್ತ್ರೀ ಪ್ರಾಸ್ತಾವಿಕ ಮಾತನಾಡಿದರು. ಗುಂಡಪ್ಪ ದೇಶಮುಖ ಪರಿವಾರದವರು ಪೂಜೆ ಹಾಗೂ ದಾಸೋಹ ಸೇವೆ ಸಲ್ಲಿಸಿದರು. ಮಂಗಲಗಿ,
ತೆಂಗಳಿ, ಕೊಡದೂರ, ಕಾಳಗಿ, ಚಿತ್ತಾಪುರ ಹಾಗೂ ಸುತ್ತಲಿನ ಗ್ರಾಮದ ನೂರಾರು ಭಕ್ತರು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next