Advertisement
ಇದನ್ನು “ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (ಸಿಬಿಡಿಸಿ) ಎಂದು ಪರಿಗಣಿಸಲಾಗಿದೆ. ಡಿಜಿಟಲ್ ಕರೆನ್ಸಿಯಿಂದಾಗಿ, ಭಾರತದ ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಅನುಕೂಲವಾಗಲಿದೆ.
ಇದು ಒಂದು ನಿರ್ದಿಷ್ಟ ನೆಟ್‌ವರ್ಕ್‌ನಡಿ ಬರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿಯೂ ನಗದು ವ್ಯವಹಾರಗಳನ್ನು ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಿಡಬಲ್ಲಂಥ ವ್ಯವಸ್ಥೆ. ಇದು ಡೇಟಾ ಎಂಟ್ರಿ ವೇಳೆ ತಪ್ಪಾದರೂ ಕೂಡಲೇ ಅದನ್ನು ಮೂಲ ಸರ್ವರ್‌ನೊಂದಿಗೆ ಹೋಲಿಸಿ ಆ ತಪ್ಪನ್ನು ಸ್ವಯಂಚಾಲಿತವಾಗಿ ಸರಿಪಡಿಸಬಲ್ಲ ಹಾಗೂ ಸೈಬರ್ ದಾಳಿಕೋರರಿಂದ ಮಾಹಿತಿಯನ್ನು ಸಂರಕ್ಷಿಸಬಲ್ಲ ವ್ಯವಸ್ಥೆಯಾಗಿದೆ. ಬಿಟ್‌ಕಾಯಿನ್‌ನಂಥ ಕ್ರಿಪ್ಟೋ ಕರೆನ್ಸಿಯು ಈ ತಂತ್ರಜ್ಞಾನವನ್ನು ವಿಶ್ವವ್ಯಾಪಿಯಾಗಿ ಬಳಸುತ್ತಿದೆ. ಇದೇ ತಂತ್ರಜ್ಞಾನವನ್ನು ಡಿಜಿಟಲ್ ರೂಪಾಯಿ ವ್ಯವಸ್ಥೆಗೆ ಅಳವಡಿಸಿಕೊಳ್ಳಲು ಆರ್‌ಬಿಐ ನಿರ್ಧರಿಸಿದೆ.
Related Articles
ಆರ್‌ಬಿಐನಿಂದ ಅಂಗೀಕೃತಗೊಂಡ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಅಡಿಯಲ್ಲಿ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಈ ವ್ಯವಹಾರ ನಡೆಯಲಿದೆ. ಈಗಾಗಲೇ ಬ್ಯಾಂಕುಗಳ ಪಾಸ್‌ಬುಕ್‌ಗಳಲ್ಲಿ ಮುದ್ರಿಸಲ್ಪಡುವ ನಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣ, ಡಿಜಿಟಲ್ ಪೇಮೆಂಟ್‌ಗಳ ಮೂಲಕ ನಾವು ಮತ್ತೂಬ್ಬರಿಗೆ ಕಳಿಸುವ ಹಣ… ಇವೆಲ್ಲವೂ ಒಂದು ರೀತಿಯಲ್ಲಿ ಡಿಜಿಟಲ್ ರೂಪಾಯಿ ಆಧಾರಿತ ವ್ಯವಹಾರಗಳೇ. ಅದು ಇನ್ನು ಸರ್ವವ್ಯಾಪಿಯಾಗಲಿದೆಯಷ್ಟೆ.
Advertisement
ಮೂಲ ಉದ್ದೇಶನೋಟುಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸಿ, ಆ ಮೂಲಕ ನೋಟುಗಳ ಮುದ್ರಣ ವೆಚ್ಚವನ್ನೂ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಉದ್ದೇಶ ಇದರ ಹಿಂದಿದೆ. ಇದು ಕ್ರಿಪ್ಟೋ ಕರೆನ್ಸಿಯಲ್ಲ!
ಆರ್‌ಬಿಐ ಬಿಡುಗಡೆ ಮಾಡಲಿರುವ ಡಿಜಿಟಲ್ ಕರೆನ್ಸಿಯನ್ನು ಕ್ರಿಪ್ಟೋ ಕರೆನ್ಸಿಗಳೊಂದಿಗೆ ಹೋಲಿಸಿಕೊಂಡು ಗೊಂದಲಕ್ಕೊಳಗಾಗಬೇಕಿಲ್ಲ. ಅದೇ ಬೇರೆ, ಇದೇ ಬೇರೆ. ಕ್ರಿಪ್ಟೋ ಕರೆನ್ಸಿಯನ್ನು ವಚ್ಯುವಲ್ ಕರೆನ್ಸಿಯೆಂದೂ ಕರೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳ್ಳೋದಾದರೆ ಅದೊಂದು ರೀತಿಯ ಹೂಡಿಕೆ. ಆದರೆ, ಡಿಜಿಟಲ್ ಕರೆನ್ಸಿಯು ಈ ಮೇಲೆ ತಿಳಿಸಿದಂತೆ ನಮ್ಮ ಹಾಗೂ ಇತರರ ನಡುವೆ ನಡೆಯುವ ಹಣಕಾಸು ವ್ಯವಹಾರಗಳ ಡಿಜಿಟಲ್ ಸ್ವರೂಪ. ಹಾಗಾಗಿ, ಹೂಡಿಕೆ ಬೇರೆ, ನಗದು ರಹಿತ ವ್ಯವಹಾರ ಬೇರೆ. ಹಾಗಾಗಿ, ಪರಿಕಲ್ಪನೆ, ವ್ಯವಹಾರಿಕ ರೀತಿಗಳೆರಡಲ್ಲೂ ಇವರೆಡು ಪರಸ್ಪರ ವಿಭಿನ್ನ. “ಕ್ರಿಪ್ಟೋ’ ಮೇಲೆ ಶೇ. 30ರಷ್ಟು ತೆರಿಗೆ
ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯ ಬಳಕೆಯ ಬಗ್ಗೆ ಕೇಂದ್ರ ಸರ್ಕಾರ ಯಾವ ನಿಲುವನ್ನು ತಳೆಯಲಿದೆ ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಕ್ರಿಪ್ಟೋ ಕರೆನ್ಸಿ ಆಧಾರಿತ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ಹಾಕುವುದಾಗಿ ಕೇಂದ್ರ ಸರ್ಕಾರ ನಿರ್ಧರಿಸಿದೆ. ಕ್ರಿಪ್ಟೋ ಕರೆನ್ಸಿಯನ್ನು ಡಿಜಿಟಲ್ ಆಸ್ತಿಯೆಂದು ಪರಿಗಣಿಸುವುದಾಗಿಯೂ ವಿತ್ತ ಸಚಿವರು ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ. ಅಲ್ಲದೆ, ಇಂಥ ಡಿಜಿಟಲ್ ಆಸ್ತಿಯಿಂದ ಮಾಡುವ ಖರ್ಚುಗಳು, ಈ ಮಾದರಿಯ ಆಸ್ತಿಯ ವರ್ಗಾವಣೆ, ಈ ಸ್ವರೂಪದ ಆಸ್ತಿಯ ಮೇಲೆ ಪಡೆಯಬಹುದಾದ ಇತರ ಆರ್ಥಿಕ ಲಾಭಗಳೆಲ್ಲವೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಕ್ರಿಪ್ಟೋ ಕರೆನ್ಸಿಯನ್ನು ಭಾರತದಲ್ಲಿ ನಿಷೇಧಿಸಬಹುದು ಎಂಬ ಗುಮಾನಿ ಬಹುದಿನಗಳಿಂದ ಇತ್ತು. ಆದರೆ, ಇತ್ತೀಚೆಗೆ, ವಿತ್ತ ಸಚಿವರೇ ಇದನ್ನು ಡಿಜಿಟಲ್ ಆಸ್ತಿಯನ್ನಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದರು.