Advertisement
ಆರ್ಥಿಕ ಸಮಸ್ಯೆ ಮತ್ತು ಪ್ರಸಕ್ತ ವಿದ್ಯಮಾನಗಳಿಂದ ಬೇಸತ್ತಿರುವ ಯುವಕರನ್ನೇ ಗುರಿ ಮಾಡಿ, ತಮ್ಮ ತತ್ತ್ವ ಸಿದ್ಧಾಂತಗಳು ಮತ್ತು ಮಹಿಳೆಯರ ಮೂಲಕ ಪ್ರಚೋದಿಸಿ ಮತಾಂತರಿಸುತ್ತಿದ್ದಾರೆ. ಇತ್ತೀಚೆಗೆ ಅಫ್ಘಾನ್‌ನ ಐಎಸ್-ಕೆಪಿ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ, ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಮಾದೇಶ್ ಪೆರುಮಾಳ್ ಹೀಗೆ ಮತಾಂತರಗೊಂಡಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ.
Related Articles
Advertisement
ಮಹಿಳೆಯಿಂದ ಮತಾಂತರ
ಮಂಗಳೂರಿನಲ್ಲಿ ವಾಸವಿದ್ದ ಕೊಡಗು ಮೂಲದ ಮಹಿಳೆಯ ಪ್ರೇರಣೆಯಿಂದಲೇ ಮಾದೇಶ್ ಪೆರುಮಾಳ್ ಮತಾಂತರಗೊಂಡಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಆಕೆಯ ಸಂಬಂಧಿ ಮಹಿಳೆಯೊಬ್ಬರನ್ನು ವಿಚಾರಣೆಗೊಳಪಡಿಸಿದ್ದರು. ಕ್ರೋನಿಕಲ್ ಫೌಂಡೇಶನ್ ಎಂಬ ಇನ್‌ಸ್ಟ್ರಾಗ್ರಾಂ ಪೇಜ್‌ನಲ್ಲಿ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ ಮಹಿಳೆ, ಅಮರ್ ಸೂಚನೆ ಮೇರೆಗೆ ರಾಜ್ಯದಲ್ಲಿ ಯುವಕರ ನೇಮಕ ಪ್ರಕ್ರಿಯೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ.
ನಾಲ್ಕೈದು ಹೆಸರು ಬಳಕೆ :
ಯುವಕ-ಯುವತಿಯರನ್ನು ಸೆಳೆಯಲು ಆ ಮಹಿಳೆ ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ನಾಲ್ಕೈದು ಹೆಸರುಗಳಲ್ಲಿ ಖಾತೆ ತೆರೆದಿದ್ದಳು. ಈ ಮೂಲಕ ತನ್ನನ್ನು ಸಂಪರ್ಕಿಸುತ್ತಿದ್ದವರಿಗೆ ಜೆಹಾದಿ ಬಗ್ಗೆ ಪ್ರಚೋದಿಸುತ್ತಿದ್ದಳು. ಹೀಗೆಯೇ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮಾದೇಶ್‌ನನ್ನು ಸಂಪರ್ಕಿಸಿ ಪ್ರೇರೇಪಿಸಿದ್ದಾಳೆ. ಇದರಿಂದ ಪ್ರೇರಣೆಗೊಂಡ ಮಾದೇಶ್, ಅಬ್ದುಲ… ಆಗಿ ಮತಾಂತರಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಐಸಿಸ್ ಆನ್‌ಲೈನ್ ನಿಯತಕಾಲಿಕ :
ಕೆಲವು ದಿನಗಳ ಹಿಂದೆ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾದ ಭಟ್ಕಳ ಮೂಲದ ಝುಫ್ರಿ ಜವ್ಹಾರ್ ದಾಮುದಿ “ವಾಯ್ಸ ಆಫ್ ಹಿಂದ್’ ಎಂಬ ಆನ್‌ಲೈನ್ ನಿಯಕಾಲಿಕವನ್ನು ತೆರೆದಿದ್ದು, ಅದರಲ್ಲಿ ಐಸಿಸ್ ಪರ ಪ್ರಚಾರ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ಖರೀದಿ, ನೇಮಕಾತಿ ಬಗ್ಗೆ ಮಾಹಿತಿ ನೀಡುತ್ತಿದ್ದ. ಚಂದಾದಾರರಿಗೆ ಮಾತ್ರ ಈ ನಿಯತಕಾಲಿಕ ತೆರೆಯಲು ಅವಕಾಶವಿತ್ತು. ಉಗ್ರ ಸಂಘಟನೆ ಆ್ಯಪ್‌ಗಳ ಅಭಿವೃದ್ಧಿಯಲ್ಲೂ ಈತನ ಪಾತ್ರವಿದೆ ಎನ್ನಲಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ :
ಭಟ್ಕಳದಲ್ಲಿ “ಅಬು ಹಜಿರ್ ಅಲ್ ಬದ್ರಿ’ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕ ಸ್ಥಾಪನೆ ಮಾಡಿಕೊಂಡಿದ್ದ ಝುಫ್ರಿ, ಆಯ್ದ ಪೊಲೀಸ್ ಸಿಬಂದಿ, ಪತ್ರಕರ್ತರು, ದೇವಸ್ಥಾನಗಳು, ಸರಕಾರಿ ಆಸ್ತಿಪಾಸ್ತಿ ಮೇಲೆ ಹಾನಿಯುಂಟು ಮಾಡಲು ತನ್ನ ಘಟಕವನ್ನು ಬಳಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮೋಹನ್ ಭದ್ರಾವತಿ