Advertisement
ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ನಲ್ಲಿ 23 ವರ್ಷದ ಯುವ ಶೂಟರ್ ಚಿಂಕಿ ಯಾದವ್ ಸ್ವರ್ಣ ಪದಕಕ್ಕೆ ಗುರಿ ಇರಿಸಿದರು. ಇಲ್ಲಿ ಚಿಂಕಿ ಯಾದವ್ ಮತ್ತು ರಾಹಿ ಸರ್ನೋಬತ್ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿತು. 32 ಅಂಕಗ ಳೊಂದಿಗೆ ಸ್ಪರ್ಧೆ ಟೈ ಆಯಿತು. ಟೈ-ಬ್ರೇಕರ್‌ನಲ್ಲಿ ಚಿಂಕಿ 4-3 ಮೇಲುಗೈ ಸಾಧಿಸುವುದರೊಂದಿಗೆ ಬಂಗಾರದಿಂದ ಸಿಂಗಾರಗೊಂಡರು. ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ 9ನೇ ಚಿನ್ನವಾಗಿದೆ. ರಾಹಿ ಬೆಳ್ಳಿ ಪದಕ ಗೆದ್ದರು. 28 ಅಂಕಗಳನ್ನಷ್ಟೇ ಸಂಪಾದಿಸಿದ ಮನು ಭಾಕರ್ ಕಂಚಿಗೆ ಸಮಾಧಾನಪಡಬೇಕಾಯಿತು.
ಬೆಳಗ್ಗೆ ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬಂಗಾರಕ್ಕೆ ಗುರಿ ಇರಿಸಿದರು. ಭೋಪಾಲ್ ಮೂಲದ, 20 ವರ್ಷದ ಪ್ರತಾಪ್ ಸಿಂಗ್ ತೋಮರ್ 462.5 ಶಾಟ್‌ಗಳ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು. ಹಂಗೇರಿಯ ಇಸ್ತವಾನ್ ಪೆನಿ ಬೆಳ್ಳಿ (461.6) ಮತ್ತು ಡೆನ್ಮಾರ್ಕ್‌ನ ಸ್ಟೆಫನ್ ಓಲ್ಸೆನ್ (450.9) ಕಂಚಿನ ಪದಕ ಗೆದ್ದರು.