Advertisement

10 ಮೀ. ಏರ್‌ ರೈಫ‌ಲ್‌ ಫೈನಲ್‌ ತಲುಪಲು ಭಾರತ ವಿಫ‌ಲ

12:30 AM Feb 26, 2019 | Team Udayavani |

ಹೊಸದಿಲ್ಲಿ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಪಂದ್ಯಾವಳಿಯ ಪುರುಷರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯ ಫೈನಲ್‌ ತಲುಪಲು ಭಾರತ ವಿಫ‌ಲವಾಗಿದೆ.

Advertisement

ಸೋಮವಾರದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ದಿವ್ಯಾಂಶ್‌ ಸಿಂಗ್‌ ಪನ್ವಾರ್‌, ರವಿಕುಮಾರ್‌ ಮತ್ತು ದೀಪಕ್‌ ಕುಮಾರ್‌ 12ರ ಆಚೆಯ ಸ್ಥಾನ ಪಡೆದು ಕೂಟದಿಂದ ನಿರ್ಗಮಿಸಿದರು.ವಿಶ್ವಕಪ್‌ ಪದಕ ವಿಜೇತ ಖ್ಯಾತಿಯ ರವಿಕುಮಾರ್‌ 627 ಅಂಕಗಳಿಗೆ ತೃಪ್ತರಾದರು. ದೀಪಕ್‌ 624.3 ಮತ್ತು ದಿವ್ಯಾಂಶ್‌ 627.2 ಅಂಕಗಳನ್ನಷ್ಟೇ ಪಡೆದು ಫೈನಲ್‌ ರೇಸ್‌ನಿಂದ ಹೊರಬಿದ್ದರು. ಹೀಗಾಗಿ ಈ ಮೂರೂ ಮಂದಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗಾಗಿ ಮುಂದಿನ ವಿಶ್ವಕಪ್‌ ತನಕ ಕಾಯಬೇಕಿದೆ.

ರವಿವಾರ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಚಿನ್ನದ ಪದಕ ಜಯಿಸಿದ ಹಂಗೇರಿಯ ಪೀಟರ್‌ ಸಿದಿ ಮತ್ತು ಇಸ್ವಾನ್‌ ಪೆನಿ ಅವರೂ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದರು. ರಶ್ಯದ ಸಗೇìಯಿ ಕಮೆನ್‌ಸ್ಕಿ ಚಿನ್ನ (249.9), ಚೀನದ ಯುಕುನ್‌ ಲಿಯು ಬೆಳ್ಳಿ (247.0) ಮತ್ತು ಝಿಚೆಂಗ್‌ ಹುಯಿ ಕಂಚಿನ ಪದಕ ಗೆದ್ದರು (225.9).

ಸತತ 2 ದಿನ ಬಂಗಾರದ ಪದಕ ಗೆದ್ದ ಭಾರತಕ್ಕೆ ಸೋಮವಾರ ನಿರಾಸೆಯ ದಿನವಾಗಿ ಪರಿಣಮಿಸಿತು. ಕಳೆದೆರಡು ದಿನ ಅಪೂರ್ವಿ ಚಾಂಡೇಲ ಮತ್ತು ಸೌರಭ್‌ ಚೌಧರಿ ಚಿನ್ನದ ಬೇಟೆಯಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next