Advertisement
ಮಂಗಳವಾರ ನಡೆದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ವಿಶ್ವದ ನಂ.1 ಖ್ಯಾತಿಯ ರುದ್ರಾಂಕ್Ò ಪಾಟೀಲ್ ಜರ್ಮನಿಯ ಮ್ಯಾಕ್ಸಿಮಿಲಿಯನ್ ಉಲ್ಬಿಚ್ ವಿರುದ್ಧ 16-8 ಅಂತರದ ಮೇಲುಗೈ ಸಾಧಿಸಿದರು. ರ್‍ಯಾಂಕಿಂಗ್ ಸುತ್ತಿನಲ್ಲೂ ರುದ್ರಾಂಕ್ಷ್ 262.0 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು. ಇಲ್ಲಿ ಉಲ್ಬಿಚ್ 260.6 ಅಂಕ ಗಳಿಸಿದ್ದರು. ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ (629.3 ಅಂಕ) ಗಳಿಸುವ ಮೂಲಕ ರುದ್ರಾಂಕ್Ò ರ್‍ಯಾಂಕಿಂಗ್ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಸಂಪಾದಿಸಿದ್ದರು.
ರುದ್ರಾಂಕ್ಷ್ ಪಾಟೀಲ್ ಸಾಧನೆ ಯೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 4 ಪದಕ ಗೆದ್ದಂತಾಯಿತು. ಇದರಲ್ಲಿ 3 ಚಿನ್ನದ ಪದಕಗಳಾಗಿವೆ. ರುದ್ರಾಂಕ್ಷ್ ಪಾಟೀಲ್ ಗೆದ್ದ 2ನೇ ಸ್ವರ್ಣ ಪದಕ ಇದಾಗಿದೆ. 10 ಮೀ. ಏರ್ ಪಿಸ್ತೂಲ್ ಮತ್ತು ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಭಾರತ ಮೊದಲೆರಡು ಚಿನ್ನದ ಪದಕ ಗಳನ್ನು ಜಯಿಸಿತ್ತು. ಇಲ್ಲಿ ಕ್ರಮವಾಗಿ ಆರ್. ನರ್ಮದಾ ನಿತಿನ್-ರುದ್ರಾಂಕ್Ò ಪಾಟೀಲ್ ಮತ್ತು ವರುಣ್ ತೋಮರ್-ರಿದಂ ಸಂಗ್ವಾನ್ ಜೋಡಿ ಚಾಂಪಿಯನ್ ಆಗಿತ್ತು. ಕಂಚಿನ ಪದಕ ವರುಣ್ ತೋಮರ್ ಅವರಿಗೆ ರವಿವಾರವೇ ಒಲಿದಿತ್ತು.