Advertisement
ಪುರುಷರ 10 ಮೀ. ಏರ್ ರೈಫಲ್‌ನ ಫೈನಲ್‌ನಲ್ಲಿ ಒಟ್ಟು 249. 0 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದ ದಿವ್ಯಾಂಶ್ ಕೇವಲ 0.4 ಅಂಕ ಗಳ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡರು. ದಿವ್ಯಾಂಶ್‌ಗೆ ಇದು ಸೀನಿಯರ್ ವಿಭಾಗದಲ್ಲಿ 2ನೇ ಸ್ಪರ್ಧೆಯಾಗಿದೆ.
ಬೆಳ್ಳಿ ಗೆಲ್ಲುವ ಮೂಲಕ ದಿವ್ಯಾಂಶ್ ಭಾರತಕ್ಕೆ 4ನೇ ಒಲಿಂಪಿಕ್ ಕೋಟಾ ದೊರಕಿಸಿಕೊಟ್ಟರು. ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್ ಮತ್ತು ಈ ವರ್ಷಾರಂಭದಲ್ಲಿ ನಡೆದ ವಿಶ್ವಕಪ್‌ಗ್ಳಲ್ಲಿ ಅಂಜುಮ್ ಮೌದ್ಗಿಲ್, ಅಪೂರ್ವಿ ಚಂಡೇಲಾ (10 ಮೀ. ಏರ್ ರೈಫಲ್) ಮತ್ತು ಸೌರಭ್ ಚೌಧರಿ (10 ಮೀ. ಏರ್ ಪಿಸ್ತೂಲ್) ಒಲಿಂಪಿಕ್ ಕೋಟಾ ಸಂಪಾದಿಸಿದ್ದರು. ಅರ್ಹತಾ ಸುತ್ತಿನಲ್ಲಿ ದಿವ್ಯಾಂಶ್ 629.2 ಅಂಕ ಪಡೆದು 3ನೇ ಸ್ಥಾನದಲ್ಲಿ ಫೈನಲ್ ಪ್ರವೇಶಿಸಿದ್ದರು. ಉಳಿದಂತೆ ಈ ಸ್ಪರ್ಧೆಯಲ್ಲಿದ್ದ ಭಾರತದ ರವಿ ಕುಮಾರ್ 44ನೇ ಸ್ಥಾನ ಮತ್ತು ದೀಪಕ್ ಕುಮಾರ್ 57ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ಈ ಕೂಟದಲ್ಲಿ ದಿವ್ಯಾಂಶ್‌ಗೆ ಇದು 2ನೇ ಪದಕ. ಗುರುವಾರ ದಿವ್ಯಾಂಶ್ -ಅಂಜುಮ ಮೌದ್ಗಿಲ್ ಜೋಡಿ 10 ಮೀ. ಏರ್ ರೈಫಲ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರ ಳೊಡ್ಡಿದ್ದರು. ಈ ಕೂಟದಲ್ಲಿ ಭಾರತಕ್ಕಿದು 3ನೇ ಪದಕವಾಗಿದೆ. ಗುರುವಾರ ಮನು ಭಾಕರ್-ಸೌರಭ್ ಚೌಧರಿ ಜೋಡಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿತ್ತು.