Advertisement

ಹಳೆ ಸ್ಯಾಟ್‌ಲೈಟ್‌ ಗಳ ಬದಲು ಮುಂದಿನ ವರ್ಷಗಳಲ್ಲಿ 10 ಹೊಸತರ ಉಡಾವಣೆ

09:56 AM Jan 31, 2020 | Hari Prasad |

ಹೊಸದಿಲ್ಲಿ: ಮುಂದಿನ ಹಲವು ವರ್ಷಗಳ ಅವಧಿಯಲ್ಲಿ ಹಳೆಯದಾಗಿರುವ ಹತ್ತು ಸಂಪರ್ಕ ಉಪಗ್ರಹಗಳನ್ನು ಬದಲಿಸುವ ಯೋಜನೆಯನ್ನು ಇಸ್ರೋ ಹೊಂದಿದೆ. ಪ್ರತಿ ಸೆಕೆಂಡ್‌ಗೆ 300 ಗಿಗಾ ಬೈಟ್‌ ಇಂಟರ್‌ನೆಟ್‌ ಸಿಗ್ನಲ್‌ಗ‌ಳನ್ನು ಕೊಡಬಲ್ಲ ಅತ್ಯಂತ ಹೆಚ್ಚಿನ ಸಾಮರ್ಥ್ಯದ ಸ್ಯಾಟ್‌ಲೈಟ್‌ ಅನ್ನು ಉಡಾಯಿಸುವ ಯೋಜನೆ ಇದೆ. ಇದರ ಮೂಲಕ ಅತ್ಯಂತ ಕುಗ್ರಾಮಕ್ಕೂ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಜಿಸ್ಯಾಟ್‌-30 ಎಂಬ ಹೆಸರಿನ ಸ್ಯಾಟ್‌ಲೈಟ್‌ 15 ವರ್ಷಗಳ ಹಿಂದೆ ಉಡಾಯಿಸಲಾಗಿದ್ದ ಇನ್ಸಾಟ್‌4-ಎ ಸ್ಥಾನದಲ್ಲಿ ಕೆಲಸ ಮಾಡಲಿದೆ.

Advertisement

ಇಸ್ರೋ ಅಧ್ಯಕ್ಷ ಕೆ.ಶಿವನ್‌ ಮಾತನಾಡಿ ಕಾರ್ಯನಿರ್ವಹಣೆಯ ಅವಧಿ ಮುಕ್ತಾಯವಾಗಲಿರುವ ಹಳೆಯದರ ಬದಲಿಗೆ ಹೊಸ ಸ್ಯಾಟಲೈಟ್‌ಗಳನ್ನು ಗಗನಕ್ಕೆ ಕಳುಹಿಸಲಾಗುತ್ತದೆ. ಸಂಪರ್ಕ, ಭೂ ಪರಿವೀಕ್ಷಣೆ, ಇಂಟರ್‌ನೆಟ್‌ ಮತ್ತು ಟಿವಿ ಚಾನೆಲ್‌ಗ‌ಳಿಗೆ ಉಪಯೋಗವಾಗುವಂಥವುಗಳನ್ನು ನಭಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಂಪರ್ಕ ಕ್ಷೇತ್ರ ವಿಸ್ತರಣೆಯಾಗುತ್ತಿರುವ ನಿಟ್ಟಿನಲ್ಲಿ ಇಸ್ರೋ ಹೆಚ್ಚು ಶಕ್ತಿಯುತ ಟ್ರಾನ್ಸ್‌ ಪಾಂಡರ್‌ಗಳನ್ನು ಒದಗಿಸಲು ಅವಿರತ ಶ್ರಮ ವಹಿಸುತ್ತಿದೆ. ಅದು ಈಗ 500 ಟ್ರಾನ್ಸ್‌ ಪಾಂಡರ್‌ಗಳನ್ನು ಹೊಂದುವ ಗುರಿ ತಲುಪುವ ನಿಟ್ಟಿನಲ್ಲಿ ದಾಪುಗಾಲು ಇಡುವ ಪ್ರಯತ್ನದಲ್ಲಿದೆ.

ತಂತ್ರಜ್ಞಾನದಲ್ಲಿ ಬದಲಾದಂತೆ ಉಪಗ್ರಹಗಳೂ ಬದಲಾವಣೆಯಾಗಬೇಕಾಗುತ್ತದೆ ಎಂದು ಇನ್ಸ್ಟಿಟ್ಯೂಟ್‌ ಫಾರ್‌ ಡಿಫೆನ್ಸ್‌ ಸ್ಟಡೀಸ್‌ ಆ್ಯಂಡ್‌ ಅನಾಲಿಸಿಸ್‌ನ ಅಜಯ್‌ ಲೇಲೆ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ವ್ಯೂಹಾತ್ಮಕ ಮತ್ತು ವಾಣಿಜ್ಯಿಕ ಉದ್ದೇಶಗಳೂ ಪ್ರಧಾನವಾಗುತ್ತವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next