Advertisement

ISRO ಮುಡಿಗೆ 2023ನೇ ಸಾಲಿನ ಲೀಫ್ ಎರಿಕ್ಸನ್‌ ಲುನಾರ್‌ ಪ್ರಶಸ್ತಿ

12:38 AM Dec 21, 2023 | Team Udayavani |

ಹೊಸದಿಲ್ಲಿ: ಭಾರತದ ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ 2023ನೇ ಸಾಲಿನ ಪ್ರತಿಷ್ಠಿತ ಲೀಫ್ ಎರಿಕ್‌ಸನ್‌ ಲುನಾರ್‌ ಪ್ರೈಸ್‌ ಲಭಿಸಿದೆ. ಐಲ್ಯಾಂಡ್‌ನ‌ ಹುಸಾವಿಕ್‌ನಲ್ಲಿರುವ ಎಕ್ಸ್‌ ಪ್ಲೋರೇಶನ್‌ ಮ್ಯೂಸಿಯಂ ಈ ಪ್ರಶಸ್ತಿಯನ್ನು ನೀಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ಮಾಡುವ ಮೂಲಕ ಇತಿಹಾಸ ನಿರ್ಮಿ ಸಿದ್ದಷ್ಟೇ ಅಲ್ಲದೆ, ಚಂದ್ರನಲ್ಲಿನ ಅನ್ವೇಷಣೆ ಮುಂದುವರಿಸಿ ಬಾಹ್ಯಾಕಾಶದ ರಹಸ್ಯಗಳನ್ನು ಅರ್ಥೈಸಿಕೊಳ್ಳಲು ಇಸ್ರೋ ನೀಡಿರುವ ಅದಮ್ಯ ಕೊಡುಗೆಯನ್ನು ಪ್ರಶಸ್ತಿ ಸ್ಮರಿಸಲಿದೆ ಎಂದು ಮ್ಯೂಸಿ ಯಂ ಹೇಳಿದೆ.

Advertisement

ಈ ವಿಚಾರವನ್ನು ರೆಕ್ಜಾವಿಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಇಸ್ರೋ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next