Advertisement

ಕಕ್ಷೆಗೆ ಸೇರಿಕೊಂಡ ಇಸ್ರೋ ಉಪಗ್ರಹ

07:30 AM Apr 13, 2018 | |

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಉಡಾಯಿಸಿದ “ಐಆರ್‌ಎನ್‌ಎಸ್‌ಎಸ್‌-1 ಎಲ್‌’ ನೇವಿಗೇಷನ್‌ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ. ಅಮೆರಿಕ ಮೂಲದ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ಮಾದರಿಯಲ್ಲಿ ತನ್ನದೇ ಪ್ರತ್ಯೇಕ ನೇವಿಗೇಷನ್‌ ವ್ಯವಸ್ಥೆ ಹೊಂದುವ ಭಾರತ ಸರಕಾರದ ಆಶಯದ ಸಾಕಾರ ಯೋಜನೆಯ ಅಂಗವಾಗಿ ಈ ಉಪಗ್ರಹ ಉಡಾಯಿಸಲಾಗಿದೆ. 

Advertisement

ಬೆಳಗಿನ ಜಾವ 4:40ಕ್ಕೆ ಪಿಎಸ್‌ಎಲ್‌ವಿ ರಾಕೆಟ್‌ನ ಮೂಲಕ ನಭಕ್ಕೆ ಚಿಮ್ಮಿದ ಉಪಗ್ರಹ, ಉಡಾವಣೆಗೊಂಡ 19 ನಿಮಿಷಗಳ ತರುವಾಯ ತನ್ನ ಕಕ್ಷೆ ಸೇರಿಕೊಂಡಿತು. ಪಿಎಸ್‌ಎಲ್‌ವಿ ಮೂಲಕ ಈವರೆಗೆ ಹಾರಿಸಲ್ಪಟ್ಟ 43 ಉಪಗ್ರಹಗಳ ಪೈಕಿ ಯಶಸ್ವಿಯಾಗಿ ಕಕ್ಷೆ ಸೇರಿದ 41ನೇ ಉಪಗ್ರಹವಿದು. 1,425 ಕೆಜಿ ಭಾರವಿದ್ದ ಈ ಉಪಗ್ರಹವನ್ನು ಬೆಂಗಳೂರು ಮೂಲದ ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಸಂಸ್ಥೆಯೊಂದಿಗೆ ಸೇರಿ ಇಸ್ರೊ ತಯಾರಿಸಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ತಯಾರಾದ 2ನೇ ಉಪಗ್ರಹವಿದು. 

ಮೋದಿ ಅಭಿನಂದನೆ: ಉಪಗ್ರಹದ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ಭಾರತದ ಸಾಮಾನ್ಯ ಪ್ರಜೆಗೆ ಅನುಕೂಲ ಕಲ್ಪಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next