Advertisement
ಚಂದ್ರನ ಅಂಗಳಕ್ಕೆ ಉಡಾಯಿಸಲು ಬಳಸುವ ರಾಕೆಟ್‌ನ ಕೊನೆಯ ಹಂತದ ಪ್ರಯೋಗವಾದ ಕ್ರಯೋಜನಿಕ್‌ಗೆ ಶಕ್ತಿ ತುಂಬುವ ಸಿಇ-20 ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಸಫಲವಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.
Related Articles
Advertisement
2019 ಜುಲೈ 22 ರಂದು ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ʻಚಂದ್ರಯಾನ-2ʼ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತಾದರೂ ಅದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಯಿತು. ಆದರೂ ಇಸ್ರೋದ ಈ ಸಾಧನೆಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇಸ್ರೋ ತಂಡಕ್ಕೆ ಧೈರ್ಯ ತುಂಬಿದ್ದನ್ನು ನೆನಪಿಸಿಕೊಳ್ಳಬಹುದು.