ಕಾರವಾರ: ಶಿರೂರು ಬಳಿ ಗುಡ್ಡ ಕುಸಿತ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ ಇಸ್ರೋ ಉಪಗ್ರಹ ಚಿತ್ರ ಹಾಗೂ ಆಧುನಿಕ ರಾಡಾರ್ ನೆರವು ಪಡೆಯಲಾಗಿದೆ. ಇನ್ನೊಂದೆಡೆ ನದಿ- ನೆಲದಡಿ 60 ಅಡಿಗಳಷ್ಟು ಆಳದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯದ ಬೃಹತ್ ಕ್ರೇನ್ ಅನ್ನು ಸ್ವಂತ ಖರ್ಚಿನಲ್ಲಿ ಹುಬ್ಬಳ್ಳಿಯಿಂದ ತರಿಸಿ ಮಂಗಳವಾರ ಕಾರ್ಯಾಚರಣೆಗೆ ಇಳಿಸಲು ಶಾಸಕ ಸತೀಶ್ ಸೈಲ್ ಮುಂದಾಗಿದ್ದಾರೆ.
ಏಳು ದಿನಗಳಿಂದ ಕಾರ್ಯಾ ಚರಣೆ ನಡೆಯುತ್ತಿದ್ದರೂ ಮಣ್ಣಿನಡಿ ಸಿಲುಕಿದೆ ಎನ್ನಲಾದ ಲಾರಿ ಹಾಗೂ ನಾಪತ್ತೆಯಾಗಿರುವ ನಾಲ್ವರ ಮೃತ ದೇಹಗಳು ಪತ್ತೆಯಾಗದ ಹಿನ್ನೆಲೆ ಯಲ್ಲಿ ಗುಡ್ಡಕುಸಿತದ ದಿನ ಗಂಗಾವಳಿ ನದಿಗೆ ಬಿದ್ದ ಕಲ್ಲು ಮಣ್ಣಿನರಾಶಿಯ ಚಿತ್ರವನ್ನು ಇಸ್ರೋ ಮೂಲಕ ಪಡೆಯಲಾಗಿದೆ. ಇದರಿಂದ ನದಿ ಯಲ್ಲಿ ಬಿದ್ದ ಕಲ್ಲು ಮಣ್ಣಿನಡಿ ವಾಹನ ಸಿಲುಕಿರಬಹುದೇ ಎಂಬ ಸುಳಿವು ಸಿಗಬಹುದು ಎಂದು ಅಂದಾಜಿಸಲಾಗಿದೆ.
ನದಿಯಲ್ಲಿ ಬಿದ್ದಿರುವ ದೊಡ್ಡ ಬಂಡೆಗಲ್ಲುಗಳನ್ನು ನದಿದಂಡೆಗೆ ತಳ್ಳುವ ಕಾರ್ಯಾಚರಣೆಗೂ ಇದು ಅನುಕೂಲಕರವಾಗಬಹುದು ಎಂದು ಹೇಳಲಾಗಿದೆ. ಹಾಗೆಯೇ ನದಿ ಮಧ್ಯದ ಕಲ್ಲು ಮಣ್ಣಿನ ರಾಶಿ ಅಡಿ ಏನಿದೆ ಎಂದು ಹುಡುಕಲು ನೌಕಾಪಡೆಯ ಮುಳುಗು ತಜ್ಞರನ್ನು ಕರೆತರುವ ಪ್ರಯತ್ನಗಳು ಸಾಗಿವೆ. 2-3 ದಿನಗಳಲ್ಲಿ ಈ ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗುವ ಸಾಧ್ಯತೆಗಳಿವೆ.
ಮತ್ತೂಂದೆಡೆ ಭೂಸೇನೆಯ ಮರಾಠಾ ರೆಜಿಮೆಂಟ್‌ನ ಸೈನಿಕರು ಹಾಗೂ ರಕ್ಷಣ ಸಿಬಂದಿ ಬೆಂಗಳೂರಿನಿಂದ ತರಿಸಲಾದ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ನೀಡುವ ಸಂಕೇತಗಳನ್ನು ಆಧರಿಸಿ ರಕ್ಷಣ ಕಾರ್ಯಾಚರಣೆ ಆರಂಭಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರು ಮುತುವರ್ಜಿ ವಹಿಸಿ ಈ ರಾಡಾರ್ ತರಿಸಿದ್ದಾರೆ. ಅದು ಹತ್ತು ಮೀಟರ್ ಆಳದ ಮಣ್ಣಿನಡಿ ಸಿಲುಕಿರಬಹುದಾದ ಮೆಟಲ್ ವಸ್ತುಗಳನ್ನು ಪತ್ತೆ ಹಚ್ಚುತ್ತದೆ. ಇದನ್ನು ಬಳಸಿ ಲಾರಿ ಪತ್ತೆಹಚ್ಚುವ ಯತ್ನ ನಡೆಯಿತಾದರೂ ಪ್ರಯೋಜನವಾಗಿಲ್ಲ.
ಹೆದ್ದಾರಿಯಲ್ಲಿ ಜನ-ವಾಹನ ಸಂಚಾರಕ್ಕೆ ನಿರ್ಬಂಧ
ಅಂಕೋಲಾ ಬಳಿಯ ಶಿರೂರಿನಲ್ಲಿ ಸಂಭವಿಸಿರುವ ಗುಡ್ಡಕುಸಿತದ ಪ್ರದೇ ಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ- ವಾಹನ ಸಂಚಾರಕ್ಕೆ ಸದ್ಯಕ್ಕೆ ಅವಕಾಶ ನೀಡದಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ. ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಮಳೆ
ಬರುವ ವೇಳೆ ಗುಡ್ಡ ಮತ್ತೆ ಕುಸಿಯ ಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಹೀಗಾಗಿ ಶಿರೂರು ಬಳಿ
ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಜನ-ವಾಹನ ಸಂಚಾರಕ್ಕೆ ನಿರ್ಬಂಧವಿದೆ ಎಂದು ತಿಳಿಸಿದರು.