Advertisement

ಸರ್ಜಿಕಲ್‌ ದಾಳಿಗೆ ಇನ್ನು ಸಿಗಲಿದೆ ಉಪಗ್ರಹ ಬಲ

03:45 AM Jun 23, 2017 | Team Udayavani |

ಹೈದರಾಬಾದ್‌/ಚೆನ್ನೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಸರ್ಜಿಕಲ್‌ ದಾಳಿ ನಡೆಸಿತ್ತು. ಈ ಮೂಲಕ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿ 38 ಮಂದಿ ಯನ್ನು ಕೊಂದಿತ್ತು ನಮ್ಮ ಸೇನೆ. ಅದಕ್ಕೆ ನೆರವಾದದ್ದು ಇಸ್ರೋದ ಕಾಟೋìಸ್ಯಾಟ್‌ ಉಪಗ್ರಹ. 

Advertisement

ಮುಂದಿನ ದಿನಗಳಲ್ಲಿ ಇಂಥ ದಾಳಿಗಳನ್ನು ಕರಾರುವಾಕ್ಕಾಗಿ ನಡೆ ಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ  ಕಾಟೋìಸ್ಯಾಟ್‌ ಸರಣಿಯ 3ನೇ ಉಪಗ್ರಹವನ್ನು ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುತ್ತದೆ. ಈ ಮೂಲಕ ಗಗನದಿಂದಲೇ ವೈರಿಗಳ ಬಗ್ಗೆ ನಿಖರ ನಿಗಾಕ್ಕೆ ವೈಜ್ಞಾನಿಕ ನೆರವೂ ಇನ್ನು ಭರಪೂರ ಸಿಗಲಿದೆ. ಅಂದ ಹಾಗೆ ಕಾಟೋìಸ್ಯಾಟ್‌ ಸರಣಿಯ 3 ನೇ ಉಪಗ್ರಹದ ಹೆಗ್ಗಳಿಕೆಯೇನೆಂದರೆ ಸಣ್ಣ ಚುಕ್ಕಿಯಂತಿರುವ ವಸ್ತು ಮತ್ತು ಅದಕ್ಕಿಂತ ಸಣ್ಣದಾಗಿರುವ ವಸ್ತು(0.6ಗಿ0.6ಮೀ) ವನ್ನು ನಿಖರವಾಗಿ ಕಂಡುಹಿಡಿಯುತ್ತದೆ. 

ಇನ್ನು ಇಸ್ರೋದ ಉಪಗ್ರಹ ವಾಹಕ ನೌಕೆ ಪಿಎಸ್‌ಎಲ್‌ವಿ-ಸಿ38ಕ್ಕೆ ಇದು ಬರೋಬ್ಬರಿ 40ನೇ ಯಾನವೂ ಹೌದು. ಹೆಸರು ಬಹಿರಂಗಪಡಿಸಲಿಚ್ಛಿಸದ ಇಸ್ರೋ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ, ಶುಕ್ರವಾರ ಬೆಳಗ್ಗೆ 9.20ಕ್ಕೆ ನಭಕ್ಕೆ ಚಿಮ್ಮಲಿರುವ ಉಪಗ್ರಹ ಕಾರ್ಯಾರಂಭ ಗೊಂಡ ಕೂಡಲೇ ರಕ್ಷಣಾ ನಿಗಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಮತ್ತು ಅದನ್ನು ಇಲಾಖೆಗೇ ಹಸ್ತಾಂತರಿ ಸಲಾಗುತ್ತದೆ. ಉಗ್ರರ ಬಂಕರ್‌ ಮತ್ತು ಕ್ಯಾಂಪ್‌ಗ್ಳನ್ನು ಕರಾರುವಾಕ್ಕಾಗಿ ಗುರುತಿಸಲು ಅದು ನೆರವಾಗುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ಸೇನಾನೆಲೆ ಸ್ಥಾಪಿಸಲು ಅನುಕೂ ಲವಾಗುತ್ತದೆ ಎಂದಿದ್ದಾರೆ. ಎಲ್ಲಿಯ ಫೋಟೋ ಬೇಕಾ ಗಿದೆಯೋ ಅದನ್ನು ಪಡೆಯಲು ಮುಂಚಿತ ಪ್ರೋಗ್ರಾ ಮಿಂಗ್‌ ಮಾಡಿರಬೇಕು. ಇದೇ ವೇಳೆ 14 ದೇಶಗಳ 30 ಉಪಗ್ರಹಗಳೂ ಶುಕ್ರವಾರ ಉಡಾವಣೆಯಾಗಲಿವೆ.

ವಿಶೇಷತೆಗಳೇನು?
ಪಿಎಸ್‌ಎಲ್‌ಸಿ- ಸಿ38ಕ್ಕೆ 40ನೇ ಯಾನ
03- ಕಾಟೋìಸ್ಯಾಟ್‌ ಸರಣಿಯ ಉಪಗ್ರಹ
712 ಕೆಜಿ- ಉಪಗ್ರಹ ತೂಕ
30- ಇತರ ಉಪಗ್ರಹಗಳು
243 ಕೆಜಿ- ಅವುಗಳ ತೂಕ
14- ಇತರ ರಾಷ್ಟ್ರಗಳು- ಆಸ್ಟ್ರಿಯಾ, ಬೆಲ್ಜಿಯಂ, ಚಿಲಿ, ಚೆಕ್‌ ಗಣರಾಜ್ಯ, ಫಿನ್‌ಲಾÂಂಡ್‌, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಲಾಟ್ವಿಯಾ,  ಲಿಥೂನಿಯಾ, ಸ್ಲೊವಾಕಿಯಾ, ಯು.ಕೆ, ಅಮೆರಿಕ
505- ಕೇಂದ್ರದಿಂದ ಕಕ್ಷೆಗಿರುವ ದೂರ (ಸನ್‌ ಸಿಂಕ್ರೊನಸ್‌ ಆರ್ಬಿಟ್‌)
09.20- ಉಪಗ್ರಹ ನಭಕ್ಕೆ ನೆಗೆಯುವ ಸಮಯ

ಅನುಕೂಲತೆಗಳೇನು?
– ಉಗ್ರರ ಶಿಬಿರಗಳು, ಬಂಕರ್‌ಗಳ ಪತ್ತೆಗೆ ಅನುಕೂಲ
– ಗಗನದಿಂದಲೇ ವೈರಿಗಳ ಮೇಲೆ ನಿಗಾ
– ಎಲ್ಲೆಲ್ಲಿ ಸೇನಾನೆಲೆಗಳನ್ನು ಸ್ಥಾಪಿಸಬೇಕೆಂಬ ಬಗ್ಗೆ ಫೋಟೋ ಮಾಹಿತಿ

Advertisement

ಉಪಗ್ರಹ ಉಡಾವಣೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡು ಅಂತಿಮ ಹಂತ ಕ್ಕಾಗಿ ಕಾಯುತ್ತಿದ್ದೇವೆ. ಮಂಗಳಯಾನ 1 ಸಾವಿರ ದಿನ ಪೂರ್ತಿಗೊಳಿಸಿದ್ದು ನಮಗೆ ಹೆಮ್ಮೆಯೇ ಸರಿ.
– ಕಿರಣ್‌ಕುಮಾರ್‌, ಇಸ್ರೋ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next