Advertisement

ಗಗನಯಾನದಲ್ಲಿ ಇಸ್ರೋ ಸಾಧನೆ

09:13 PM Feb 11, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಮಾನವ ಸಹಿತ ಯಶಸ್ವಿ ಗಗನ ಯಾನದಲ್ಲಿ ಇಸ್ರೋ ಸಂಸ್ಥೆ ಉತ್ತಮ ಸಾಧನೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಇಸ್ರೋ ಪ್ರಪಂಚಕ್ಕೆ ಅತ್ಯುನ್ನತ ವೈಜ್ಞಾನಿಕ ಕೊಡುಗೆ ನೀಡಲಿದೆ ಎಂದು ಇಸ್ರೋ ಸಂಸ್ಥೆಯ ಐಎಸ್‌ಟಿಆರ್‌ಎಪಿ ವಿಭಾಗದ ವಿಜ್ಞಾನಿ ಜೆ.ಸಿ.ಗುರಪ್ಪ ತಿಳಿಸಿದರು.

Advertisement

ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚು ಹೆಚ್ಚು ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಸಂಶೋಧನೆಯತ್ತ ಮುಂದಿನ ಪೀಳಿಗೆಯನ್ನು ಕರೆದೊಯ್ಯಲು ಭದ್ರ ಬುನಾದಿ ಹಾಕಬೇಕೆಂದರು.

ಶಿಸ್ತು ಪಾಲನೆ ಅಗತ್ಯ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿದೆ. ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಂಡಾಗ ಮಾತ್ರ ಯವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಮಕ್ಕಳ ಮೇಲೆ ನಿಗಾ ವಹಿಸಿ: ಪೋಷಕರು ಮಕ್ಕಳಿಗಾಗಿ ಆಸ್ತಿ, ಹಣ ಮಾಡುವ ಬದಲು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ದೇಶದ ಆಸ್ತಿಯನ್ನಾಗಿಸಬೇಕೆಂದು ಪೋಷಕರಿಗೆ ತಿಳಿಸಿದರು. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ನಡವಳಿಕೆಗಳ ಮೇಲೆ ನಿರಂತರ ನಿಗಾ ವಹಿಸುವ ಜವಾಬ್ದಾರಿ ನಿರ್ವಹಿಸಬೇಕೆಂದರು. ಭಾಷೆಯು ಮುಂದಿನ ದಿನಗಳಲ್ಲಿ ತೊಡಕಾಗುವುದಿಲ್ಲ. ಇಂಗ್ಲಿಷ್‌ ಭಾಷಾ ಸಾಮರ್ಥ್ಯ ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮವಾಗಿದೆ ಎಂದರು.

ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ದೀಪ್‌ರೈ ಮಾತನಾಡಿ, ಹಿರಿಯ ನಿರ್ದೇಶಕ ಶಾಂತಾರಾಮ್‌ರಂತಹ ಮೇಧಾವಿಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಚಿಕ್ಕಬಳ್ಳಾಪುರ ಎಲ್ಲಾ ಕ್ಷೇತ್ರಗಳಲ್ಲಿಯೂ ದೇಶದ ಗಮನ ಸೆಳೆದಿದೆ ಎಂದರು. ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ತಿದ್ದಿ ತೀಡುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಜವಾಬ್ದಾರಿಯಿದೆ ಎಂದರು.

Advertisement

ಮಕ್ಕಳು ದೇವರ ಪ್ರತಿರೂಪ: ಸಿನಿಮಾ ರಂಗವು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಬೇಕೆ ವಿನಃ ಹಾಳುಗೆಡವಬಾರದೆಂಬ ಉದ್ದೇಶದಿಂದ ಸದಾಭಿರುಚಿಯ ಸಿನಿಮಾಗಳ ನಿರ್ಮಾಣ ಕಾರ್ಯ ನಡೆಯುತಿದೆ. ದೇವರ ಪ್ರತಿರೂಪಗಳೇ ಮಕ್ಕಳಾಗಿದ್ದು, ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಅವಶ್ಯ. ಶಿಕ್ಷಕ ವೃತ್ತಿ ಸರ್ವಶ್ರೇಷ್ಠವಾಗಿದ್ದು, ಶಿಕ್ಷಕರಿಂದ ಮಾತ್ರ ಉತ್ತಮ ದೇಶ ನಿರ್ಮಾಣ ಸಾಧ್ಯ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪೊ›ಫೆಸರ್‌, ಸಂಸ್ಕೃತಿ ಹಾಗೂ ಬುಡಕಟ್ಟು ಜನಾಂಗಗಳ ಸಂಶೋಧಕ ಡಾ.ಹನಿಯೂರು ಚಂದ್ರೇಗೌಡ ಮಾತನಾಡಿ, ಗ್ರಾಮೀಣ ಭಾಗದ ಜನತೆಯ ಸೊಗಡು ಜಾನಪದದಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ ಎಂದರು. ಅದನ್ನು ಜೋಪಾನವಾಗಿ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಶೈಲಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿಬ್ಬೂರಹ‌ಳ್ಳಿಯ ಸಾಯಿರಾಂ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್‌, ಶ್ರೀ ಇಂದಿರಾ ನಾರಾಯಣ್‌ ಎಜುಕೇಷನ್‌ ಟ್ರಸ್ಟ್‌ನ ಸದಸ್ಯರಾದ ಸುನಂದಮ್ಮ ಉಪಸ್ಥಿತರಿದ್ದರು.

ಸನ್ಮಾನ: ಚಿಕ್ಕಬಳ್ಳಾಪುರ ನಗರದ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಗರಸಭೆಯ ನೌಕರ ಹರೀಶ್‌, ನಿವೃತ್ತ ಯೋಧ ನಾಗರಾಜ್‌, ಭಾರತ ಸೇವಾದಳದ ಅಧಿಕಾರಿ ಪ್ರಕಾಶ್‌, ಡಾಕ್ಟರೇಟ್‌ ಪದವಿಗಳಿಸಿರುವ ಇತಿಹಾಸ ತಜ್ಞ ಡಾ.ಷಫಿ ಅಹ್ಮದ್‌ರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next