Advertisement
ತನ್ನ ನ್ಯಾವಿಗೇಷನ್ ತಂತ್ರಜ್ಞಾನವನ್ನು ಮೊಬೈಲ್ ಸೆಟ್‌ಗಳಲ್ಲಿ ಸಂಯೋಜಿಸಲು ಕ್ವಾಲ್‌ಕಾಮ್ ಕಂಪನಿಯೊಂದಿಗೆ ಈಗಾಗಲೇ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಇದೀಗ ಆ್ಯಪಲ್‌ನ ಹೊಸ ಮಾಡೆಲ್‌ಗಳಾದ ಎ17 ಪ್ರೊ, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮೊಬೈಲ್‌ಗಳು “ನಾವಿಕ್’ ತಂತ್ರಜ್ಞಾನ ಒಳಗೊಂಡಿವೆ.
“ನಾವಿಕ್’ ಎರಡು ರೀತಿಯ ಲೊಕೇಶನ್ ಸೇವೆಗಳನ್ನು ಒದಗಿಸಲಿದೆ. ಸ್ಟಾಂಡರ್ಡ್ ಪೊಸಿಷನಿಂಗ್ ಸರ್ವಿಸ್ ಹಾಗೂ ಭದ್ರತಾ ಸಂಸ್ಥೆಗಳು ಮತ್ತು ಮಿಲಿಟರಿ ಪಡೆಗಳಿಗೆ ಎನ್‌ಕ್ರಿಪ್ಟ್ ಸೇವೆಗಳನ್ನು ಒದಗಿಸಲಿದೆ. 7 ಉಪಗ್ರಹಗಳ ಸಹಾಯದಿಂದ ನಾವಿಕ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಈ ಪೈಕಿ ಮೂರು ಜಿಯೋಸ್ಟೇಷನರಿ ಅರ್ಥ್ ಆರ್ಬಿಟ್(ಜಿಇಒ) ಉಪಗ್ರಹಗಳು ಹಾಗೂ ನಾಲ್ಕು ಜಿಯೋಸಿಂಕ್ರೋನಸ್ ಆರ್ಬಿಟ್(ಜಿಎಸ್‌ಒ) ಉಪಗ್ರಹಗಳು. ಭಾರತವು ತನ್ನದೇ ಆದ ನ್ಯಾವಿಗೇಷನ್ ವ್ಯವಸ್ಥೆಯನ್ನು ಹೊಂದಿದೆ. ಇದು ಭವಿಷ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸಮಯದಲ್ಲೂ ಕೂಡ ಕಾರ್ಯನಿರ್ವಹಿಸಲಿದೆ. 22ರಿಂದ ಮಾರಾಟ:
ಆ್ಯಪಲ್ ಐಫೋನ್ 15 ಸರಣಿ ಮೊಬೈಲ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಸೆ.15ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಸೆ.22ರಿಂದ ಇದರ ಮಾರಾಟ ಆರಂಭವಾಗಲಿದೆ. ನೂತನ ಮೊಬೈಲ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಫ್ರಂಟ್ ಫೇಸಿಂಗ್ ಕ್ಯಾಮೆರಾ ಮತ್ತು ಫೇಸ್ ಐಡಿ ಹೊಂದಿದೆ. ಜತೆಗೆ ಐಒಎಸ್17 ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೊಬೈಲ್ ಫೋನ್‌ಗಳು 48 ಮೆಗಾಫಿಕ್ಸಲ್ ಕ್ಯಾಮೆರಾ ಹೊಂದಿವೆ.
Related Articles
ಐಫೋನ್ 15 ಆರಂಭಿಕ ಬೆಲೆ 79,900 ರೂ., ಐಫೋನ್ 15 ಪ್ಲಸ್ ಆರಂಭಿಕ ಬೆಲೆ 89,900 ರೂ., ಐಫೋನ್ 15 ಪ್ರೊ ಆರಂಭಿಕ ಬೆಲೆ 1,34,900 ರೂ. ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ಆರಂಭಿಕ ಬೆಲೆ 1,59,900 ರೂ. ಇದೆ.
Advertisement