Advertisement

ನವೆಂಬರ್‌ನಲ್ಲಿ ಇಸ್ರೋ ಅಂತಾರಾಷ್ಟ್ರೀಯ ಸಮ್ಮೇಳನ

12:07 PM Oct 31, 2017 | Team Udayavani |

ಬೆಂಗಳೂರು: ಇಸ್ರೋ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಫಿಕ್ಕಿ) ಜತೆಯಾಗಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಕುರಿತು ನ.20, 21ರಂದು ದೆಹಲಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ.

Advertisement

ಭಾರತದ ಬಾಹ್ಯಾಕಾಶ ವಲಯದ ಭವಿಷ್ಯದ ದೃಷ್ಟಿಕೋನ ಹಾಗೂ ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಪ್ರಬಲ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಕೈಗಾರಿಕೆಗಳ ಭಾಗವಹಿಸುವಿಕೆಯ ಉದ್ದೇಶದಿಂದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕೈಗಾರಿಕೆಗಳಿಂದ ಇಸ್ರೋಗೆ ಮಾಡಬಹುದಾದ ಸಹಾಯ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರಿಗೆ ಜಾಗತಿಕ ಮಟ್ಟದಲ್ಲಿರುವ ಅವಕಾಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು  ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎರಡು ದಿನದ ಈ ಸಮ್ಮೇಳನದಲ್ಲಿ ಸ್ಪೇಸ್‌ ಇಂಡಸ್ಟ್ರೀ ಇಕೋ ಸಿಸ್ಟಮ್‌: ರೋಲ್‌ ಮತ್ತು ಅಪರ್ಚುನಿಟಿಸ್‌ ಫಾರ್‌ ಇಂಡಸ್ಟ್ರೀ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಖಾಸಗಿ, ಸಾರ್ವಜನಿಕ ಸಹಭಾಗಿತ್ವ, ಕ್ಯಾಪಸಿಟಿ ಬಿಲ್ಡಿಂಗ್‌ ಮತ್ತು ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌, ಬಾಹ್ಯಾಕಾಶ ಕ್ಷೇತ್ರದಲ್ಲಿ ಕೈಗಾರಿಕೆಗಳ ಪಾತ್ರ ಇತ್ಯಾದಿ ವಿಷಯದ ಬಗ್ಗೆ ಚರ್ಚೆ, ಸಂವಾದ, ವಿಚಾರ ಮಂಡನೆ ನಡೆಯಲಿದೆ ಎಂದರು.

20 ಅಧಿಕ ದೇಶದಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಸ್ರೋ ಹಿರಿಯ ವಿಜ್ಞಾನಿಗಳು, ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು, ಶಿಕ್ಷಣ, ಇಂಧನ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರು ಭಾಗಹಿಸಲಿದ್ದಾರೆ ಎಂಬ ಫಿಕ್ಕಿ ಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ವಿವೇಕ್‌ ಪಂಡಿತ್‌ ತಿಳಿಸಿದರು.

Advertisement

ಖಾಸಗಿ ಸಂಸ್ಥೆಯೊಂದಿಗೆ ಸೇರಿ ರಾಕೆಟ್‌ ಉಡಾವಣೆ: ಇತ್ತೀಚಿನ ವರ್ಷದಲ್ಲಿ ಉಡಾವಣಾ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯು ಜಂಟಿ ಕಾರ್ಯಾಚರಣೆಯಡಿ ಖಾಸಗಿ ಸಂಸ್ಥೆಯೊಂದಿಗೆ ಸೇರಿಕೊಂಡು 2020ರ ವೇಳೆಗೆ ರಾಕೆಟ್‌ ಉಡಾವಣೆ ಮಾಡಲಿದೆ. ಇದು ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಉದ್ದೇಶ ಮಾತ್ರವಲ್ಲ.

ಬದಲಾಗಿ ದೇಶದ ಖಾಸಗಿ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಬೇಕು. ಬೇಡಿಕೆ ದಿನೇದಿನೇ ಹೆಚ್ಚುತ್ತಲೇ ಇದೆ. ದೇಶದ 31 ಖಾಸಗಿ ಸಂಸ್ಥೆಗಳು ಸಣ್ಣಮಟ್ಟದ ಉಡಾವಣಾ ರಾಕೆಟ್‌ ತಯಾರಿಸಲು ಸಿದ್ಧವಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಗುಣಮಟ್ಟ ಬಹಳ ಮುಖ್ಯವಾಗುತ್ತದೆ. ಅಪಾಯ ಹೆಚ್ಚಿರುವುದರಿಂದ ಧೈರ್ಯವೂ ಅಗತ್ಯ. ವೀಕ್‌ ಹಾರ್ಟ್‌ ಇಟ್ಟುಕೊಂಡು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next