Advertisement

ದೀಪಾವಳಿಗೆ ಇಸ್ರೋ ಮಹಾನ್ ಸಾಧನೆ; 36 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ರಾಕೆಟ್

09:19 AM Oct 23, 2022 | Team Udayavani |

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ} ಅತಿ ಭಾರದ ರಾಕೆಟ್ ಎಲ್‌ವಿಎಂ3-ಎಂ2 ತನ್ನ ಮೊದಲ ಕಮರ್ಷಿಯಲ್ ಕಾರ್ಯಾಚರಣೆಯಲ್ಲಿ ಯುನೈಟೆಡ್ ಕಿಂಗ್ ಡಮ್ ಮೂಲದ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಭಾನುವಾರ ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಇದೊಂದು ಐತಿಹಾಸಿಕ ಮಿಷನ್ ಎಂದು ಇಸ್ರೋ ಹೇಳಿದೆ.

Advertisement

36 ಬ್ರಾಡ್‌ಬ್ಯಾಂಡ್‌ ಉಪಗ್ರಹಗಳನ್ನು  ಹೊತ್ತ ಎಲ್‌ವಿಎಂ3-ಎಂ2 ರಾಕೆಟ್‌ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಕೇಂದ್ರದಲ್ಲಿರುವ 2ನೇ ಲಾಂಚ್‌ ಪ್ಯಾಡ್‌ ನಿಂದ ಶನಿವಾರ ಮಧ್ಯರಾತ್ರಿ 12.07ಕ್ಕೆ ನಭಕ್ಕೆ ಹಾರಿದ ರಾಕೆಟ್‌ ಕಕ್ಷೆಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಕೂರಿಸಿದೆ.

ಇದನ್ನೂ ಓದಿ:ಮಣಿಪಾಲ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಕಾಮಗಾರಿ; ಮಳೆಯಲ್ಲಿ ವಾಹನ ಸವಾರರು ಪರದಾಟ

ಒನ್ ವೆಬ್ ಖಾಸಗಿ ಸ್ಯಾಟಲೈಟ್ ಸಂವಹನ ಸಂಸ್ಥೆಯಾಗಿದ್ದು, ಭಾರತದ ಭಾರ್ತಿ ಎಂಟರ್ ಪ್ರೈಸಸ್ ಈ ಸಂಸ್ಥೆಯಲ್ಲಿ ಪ್ರಮುಖ ಹೂಡಿಕೆದಾರ ಹಾಗೂ ಷೇರು ಹೊಂದಿರುವ ಸಂಸ್ಥೆಯಾಗಿದೆ. 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

ಭಾರಿ ತೂಕದ ಉಪಗ್ರಹಗಳನ್ನು ಹಾರಿಬಿಡಲೆಂದೇ ತಯಾರಿಸಿರುವ ಈ ರಾಕೆಟ್‌ 8 ಟನ್‌ ಪೇಲೋಡ್‌ ಹೊತ್ತೊಯ್ಯಬಲ್ಲದಾಗಿದೆ. ಇದು 43.5 ಮೀ ಎತ್ತರದ ರಾಕೆಟ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next