Advertisement

ಇಸ್ರೋ ತಜ್ಞರಿಗೆ ಫ್ರಾನ್ಸ್‌ನಲ್ಲಿ ತರಬೇತಿ

12:30 AM Mar 07, 2019 | |

ಹೊಸದಿಲ್ಲಿ: ಗಗನಯಾನ ಯೋಜನೆ ಅಡಿ ಇಸ್ರೋ ಪರಿಣಿತರಿಗೆ ಫ್ರಾನ್ಸ್‌ನ ಟೌಲೋಸ್‌ ಸ್ಪೇಸ್‌ ಸೆಂಟರ್‌ನಲ್ಲಿ ಈ ತಿಂಗಳಿನಿಂದ ತರಬೇತಿ ಒದಗಿಸಲು ನಿರ್ಧರಿಸಲಾಗಿದೆ. ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ ತರಬೇತಿ ನೀಡಲಿದೆ. ಹಿಂದೂ ಮಹಾಸಾಗರದಲ್ಲಿ ಹಡಗುಗಳನ್ನು ಗುರುತಿಸಿ ಟ್ರ್ಯಾಕ್‌ ಮಾಡುವುದಕ್ಕಾಗಿ ಭಾರತ ಮತ್ತು ಫ್ರಾನ್ಸ್‌ ಸಹಭಾಗಿತ್ವದಲ್ಲಿ ವಿಚಕ್ಷಣಾ ಉಪಗ್ರಹ ನಿರ್ಮಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಇಸ್ರೋ ಅಧ್ಯಕ್ಷ ಕೆ. ಶಿವನ್‌, ಸಿಎನ್‌ಇಎಸ್‌ ಅಧ್ಯಕ್ಷ ಜೀನ್‌ ವೆಸ್‌ ಲೆ ಗಾಲ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Advertisement

ಟೌಲೋಸ್‌ನಲ್ಲಿ ಬಾಹ್ಯಾಕಾಶ ಯಾನಕ್ಕೆ ತರಬೇತಿ ನೀಡಲಾಗುತ್ತದೆ. ಫ್ರಾನ್ಸ್‌ -ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ತಂಡವನ್ನು ಗಗನಯಾನ ಯೋಜನೆಗೆ ರೂಪಿಸಲಾಗಿತ್ತು. ಗಗನಯಾನಿಗಳ ಆರೋಗ್ಯ ತಪಾಸಣೆ, ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆ ವಿಷಯಗಳ ತರಬೇತಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next