Advertisement

2023ರ ಅಂತ್ಯಕ್ಕೆ ಇಸ್ರೋ ಬಾಹ್ಯಾಕಾಶ ಪ್ರವಾಸ

09:49 PM Jul 21, 2022 | Team Udayavani |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಪ್ರವಾಸಕ್ಕೆ ಸದ್ದಿಲ್ಲದೆ ತಯಾರಿ ನಡೆಸಿದೆ. ಮುಂದಿನ ವರ್ಷದ ಕೊನೆಯ ಭಾಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಸಚಿವ ಡಾ. ಜಿತೇಂದ್ರ ಸಿಂಗ್‌, ರಾಜ್ಯಸಭೆಗೆ ತಿಳಿಸಿದ್ದಾರೆ.

Advertisement

ಭೂಮಿಯ ಗುರುತ್ವಾಕರ್ಷಣೆ ಬಹಳ ಕಡಿಮೆಯಿರುವ ಅಥವಾ ಇಲ್ಲದೇ ಇರುವ ಅಂತರಿಕ್ಷ ವ್ಯಾಪ್ತಿಗೆ ಜನರನ್ನು ಪ್ರವಾಸಕ್ಕೆ ಕಳಿಸಲು ಇಸ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ, ಇಸ್ರೋ ಜಗತ್ತಿನ 61 ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಿಂಗ್‌, ರಾಜ್ಯಸಭೆಗೆ ತಿಳಿಸಿದ್ದಾರೆ.

ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಯೋಧರು ತಯಾರಿ ನಡೆಸಿದ್ದಾರೆ. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ದೇಶೀಯವಾಗಿ ನೌಕೆಯನ್ನು ಸಿದ್ಧಪಡಿಸಿದೆ. ಈ ನೌಕೆಯಲ್ಲಿ ಗಗನಯಾತ್ರಿಗಳಾಗಿ ಬಾಹ್ಯಾಕಾಶಕ್ಕೆ ತೆರಳುವ ಯೋಧರು, ಕೆಲವು ಕಾಲ ಅಲ್ಲಿ ಪರ್ಯಟನೆ ಮಾಡಿ ಆನಂತರ ಭೂಮಿಗೆ ಹಿಂದಿರುಗುವ ಯೋಜನೆ ಇದಾಗಿದೆ.

2023ಆರಂಭದಲ್ಲೇ ಚಂದ್ರಯಾನ 3 :

2023ರ ಆರಂಭಿಕ ತಿಂಗಳುಗಳಲ್ಲಿ ಇಸ್ರೋ ಚಂದ್ರಯಾನ-3 ಅನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. ಚಂದ್ರಯಾನದ ನಂತರ ಆದಿತ್ಯ ಎಲ್‌-1 ಉಗ್ರಹವನ್ನು ಉಡಾವಣೆ ಮಾಡಲಾಗುವುದು. ಈ ಉಪಗ್ರಹ ಸೂರ್ಯನ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಉಪಯೋಗಕರವಾಗಲಿದೆ. ಹಾಗೆಯೇ 2023ರ ವರ್ಷಾಂತ್ಯದೊಳಗೆ ಗಗನಯಾನದ ಅಬಾರ್ಟ್‌ ಪ್ರದರ್ಶನ ಪರೀಕ್ಷೆಯನ್ನು ಕೈಗೊಳ್ಳಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next