ನವದೆಹಲಿ: ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರ ಸಂಬಳದ ಮಾಹಿತಿ ನೀಡಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ಆರ್ ಪಿಜಿ ಸಮೂಹದ ಅಧ್ಯಕ್ಷ, ಖಾತ ಉದ್ದಮಿ ಹರ್ಷ ಗೋಯೆಂಕಾ ಅವರು ಅಸಮಾಧಾನವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟಕರ ವಿಚಾರ ಎಂದು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Honeytrap Case: ಹನಿಟ್ರ್ಯಾಪ್ ಮಾಸ್ಟರ್ ಮೈಂಡ್ ಕಳವು ಕೇಸಲ್ಲಿ ಬಂಧನ
ಹಲವಾರು ಸಾವಿರ ಕೋಟಿ ರೂಪಾಯಿಯನ್ನು ಬಾಹ್ಯಾಕಾಶ ಏಜೆನ್ಸಿಗೆ ಹಂಚಿಕೆ ಮಾಡಲಾಗಿದ್ದು, ಇಸ್ರೋ ಮುಖ್ಯಸ್ಥರಿಗೆ 2.5 ಲಕ್ಷ ರೂಪಾಯಿಗಳ ಸಂಬಳದ ಅಗತ್ಯವಿಲ್ಲ. ಬಾಹ್ಯಾಕಾಶ ಯೋಜನೆಗೆ ಕೋಟ್ಯಂತರ ರೂಪಾಯಿ ಹಣ ನೀಡಿರುವುದರಿಂದ ಅವರು ಈ ಹಣದಿಂದಲೇ ಯೋಜನೆಯನ್ನು ಕಾರ್ಯನಿರ್ವಹಿಸಬಹುದಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
ಈ ಟ್ವೀಟ್ ಗೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ಯಮಿ ಹರ್ಷ ಗೋಯೆಂಕಾ, ಇಸ್ರೋದ ಅಧ್ಯಕ್ಷ ಎಸ್.ಸೋಮನಾಥ್ ಸೇರಿದಂತೆ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಈ ಅಭಿಪ್ರಾಯವ್ಯಕ್ತಪಡಿಸಿರುವುದು ದುರದೃಷ್ಟಕರ. ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ಇಸ್ರೋ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಇಸ್ರೋ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದೆ. ನಾವೆಲ್ಲರೂ ಸೋಮನಾಥ್ ಮತ್ತು ಅವರ ತಂಡದ ತ್ಯಾಗವನ್ನು ಶ್ಲಾಘಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ತಿಂಗಳಿಗೆ 2.5 ಲಕ್ಷ ಸಂಬಳ ನ್ಯಾಯ ಸಮ್ಮತವೇ:
ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರ ತಿಂಗಳ ಸಂಬಳ 2.5 ಲಕ್ಷ ಸಮರ್ಥನೀಯವೇ, ನ್ಯಾಯಸಮ್ಮತವೇ ಎಂದು ಗೋಯೆಂಕಾ ಪ್ರಶ್ನಿಸಿದ್ದಾರೆ. ಸೋಮನಾಥ ಅವರಂತಹ ವಿಜ್ಞಾನಿಗಳು ಹಣವನ್ನು ಮೀರಿದ ಅಂಶಗಳಿಂದ ಪ್ರೇರಿತರಾಗಿರುತ್ತಾರೆ ಅಂತ ತಿಳಿದುಕೊಳ್ಳೋಣ. ಆದರೆ ಅವರು ತಮ್ಮ ದೇಶಕ್ಕೆ ಕೊಡುಗೆ ನೀಡಲು, ದೇಶದ ಹೆಮ್ಮೆಗಾಗಿ ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಂತಹ ಸಮರ್ಪಣಾ ಭಾವದ ಜನರಿಗೆ ನಾನು ತಲೆಬಾಗುತ್ತೇನೆ ಎಂದು ಗೋಯೆಂಕಾ ಎಕ್ಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್ ಅವರ ಸಂಬಳದ ಕುರಿತು ಹರ್ಷ ಗೊಯೇಂಕಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿದ ಪೋಸ್ಟ್ ಗೆ ಹಲವು ಮಂದಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.