Advertisement

ISRO: ಗಗನಯಾನ: ಮಾಸಾಂತ್ಯದಲ್ಲಿ ಕ್ರ್ಯೂ ಪರೀಕ್ಷೆ

11:36 PM Oct 05, 2023 | Team Udayavani |

ಹೊಸದಿಲ್ಲಿ: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ದೇಶದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಯೋಜನೆ ಗಗನಯಾನದತ್ತ ಇಸ್ರೋ ಗಮನ ನೆಟ್ಟಿದ್ದು, ಮಾಸಾಂತ್ಯದಲ್ಲಿ ಯೋ ಜನೆಗೆ ಸಂಬಂಧಿಸಿದಂತೆ ಕ್ರ್ಯೂ ಎಸ್ಕೇಪ್‌ ಸಿಸ್ಟಮ್‌ನ ಪರೀಕ್ಷೆ ನಡೆ ಸಲು ಯೋಜಿಸಿದೆ.

Advertisement

ಈ ಸಂಬಂಧಿಸಿದಂತೆ ವಿಕ್ರಮ್‌ ಸಾರಾ ಭಾಯಿ ಸ್ಪೇಸ್‌ ಸೆಂಟರ್‌ (ವಿಎಸ್‌ಎಸ್‌ಸಿ) ನಿರ್ದೇಶಕ ಎಸ್‌. ಉನ್ನಿಕೃಷ್ಣನ್‌ ಮಾಹಿತಿ ನೀಡಿದ್ದಾರೆ. ಬೆಂಗಳೂರಿ ನಲ್ಲಿ ಮಾತನಾಡಿದ ಅವರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ಒಳಗಿದ್ದಂತೆಯೇ ಇನ್‌ಫ್ಲೈಟ್‌ ಅಬಾರ್ಟ್‌ ನಡೆಸಲು ಸಾಧ್ಯವಿದೆಯೇ ಎಂದು ಪರೀಕ್ಷಿಸುವ ನಿಟ್ಟಿನಲ್ಲಿ ಕ್ರ್ಯೂ ಎಸ್ಕೇಪ್‌ ಸಿಸ್ಟಮ್‌ ಅನ್ನು ಪರೀಕ್ಷಿಸಬೇಕಿದೆ. ಇದಕ್ಕಾಗಿ ಟೆಸ್ಟ್‌ ವೆಹಿಕಲ್‌ಗ‌ಳನ್ನೂ ಅಭಿವೃದ್ಧಿಪಡಿಸಲಾಗಿದ್ದು, ಅವುಗಳೆಲ್ಲವೂ ಉಡಾವಣೆಗಾಗಿ ಶ್ರೀ ಹರಿಕೋಟಾವನ್ನು ತಲುಪಿದ್ದಾಗಿದೆ. ಉಡಾ ವಣೆಗಾಗಿ ಸಿದ್ಧತೆಗಳು ನಡೆ ಯುತ್ತಿದ್ದು, ಮಾಸಾಂತ್ಯದಲ್ಲಿ ಈ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ ಎಂದು ಗುರುವಾರ ಹೇಳಿದ್ದಾರೆ.

ಕ್ರೂ ಎಸ್ಕೇಪ್‌ ಸಿಸ್ಟಮ್‌ ಗಗನಯಾನ ಯೋಜನೆಯ ಬಹುದೊಡ್ಡ ಅಂಶ ವಾಗಿದ್ದು, ಡೈನಮಿಕ್‌ ಪ್ರಶೆರ್‌ ಹಾಗೂ ಟ್ರಾನ್ಸಾನಿಕ್‌ ಕಂಡಿಶನ್‌ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯ ನಿರ್ವಹಿಸುವುದು ಅತ್ಯಗತ್ಯ ವಾಗಿದೆ. ಅದರ ಕಾರ್ಯ ನಿರ್ವಹಣೆಯನ್ನು ಖಾತರಿ ಪಡಿಸಿ ಕೊಳ್ಳುವ ಉದ್ದೇಶವನ್ನು ಪರೀಕ್ಷಾರ್ಥ ಉಡಾವಣೆ ಹೊಂದಿದೆ. ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಲಿದ್ದು, ಈ ಮಾಸಾಂತ್ಯದಲ್ಲಿ ಟಿವಿ-ಡಿ1 ಎನ್ನುವ ಪರೀಕ್ಷಾರ್ಥ ವಾಹನ ಉಡಾವಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next