Advertisement
ಈ ಪರೀಕ್ಷೆಗಳಿಗೆ ಆಗ್ರಾದಲ್ಲಿರುವ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ( ಎಡಿಆರ್‌ಡಿಇ) ಮತ್ತು ಡಿಆರ್‌ಡಿಒ ಪೂರ್ಣ ಸಹಕಾರ ನೀಡಿವೆ. ಪ್ರಸ್ತುತ ಪರೀಕ್ಷೆಯೂ ಗಗನಯಾನ ನೌಕೆಯನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಿ ಮರಳಿ ಕರೆಯಿಸಿಕೊಳ್ಳಲು ಪೂರಕವಾಗಿದೆ. ಗಗನಯಾನ ನೌಕೆ ಮರಳಿ ಭೂಮಿಗೆ ಇಳಿಯುವಾಗ ಅದರ ವೇಗವನ್ನು ನಿಯಂತ್ರಿಸಲು ಡ್ರೋಗ್ ಪ್ಯಾರಾಚೂಟ್ ಸಹಾಯ ಮಾಡುತ್ತದೆ. ಈ ಪ್ಯಾರಾಚೂಟನ್ನು ಮಾರ್ಟರ್ ಎಂಬ ಸಾಧನದಲ್ಲಿ ಇರಿಸಲಾಗಿರುತ್ತದೆ. ಪರಿಸ್ಥಿತಿಗನುಗುಣವಾಗಿ ನೀಡಲ್ಪಟ್ಟ ಆದೇಶಕ್ಕೆ ತಕ್ಕಂತೆ ತೆರೆದುಕೊಳ್ಳುತ್ತದೆ. ಗಗನಯಾನ ನೌಕೆಯ ಹಿಂಭಾಗದಲ್ಲಿ ಇದು 5.8 ಮೀಟರ್ ಉದ್ದಕ್ಕೆ ಚಾಚಿಕೊಳ್ಳುತ್ತದೆ. Advertisement
ISRO: ಇಸ್ರೋ ಗಗನಯಾನ ಪರೀಕ್ಷೆ ಯಶಸ್ವಿ
08:23 PM Aug 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.