Advertisement
ಸರಕಾರ ನಿಯಮಗಳನ್ನು ರೂಪಿಸುತ್ತದೆ, ಆದರೆ ಪಾಲಿಸುವ ಪ್ರಜೆಗಳಿಲ್ಲ ಎಂದ ಮೇಲೆ ಅದು ನೀರ ಮೇಲಿನ ಹೋಮ. ಈಗ ಅಂತಹದ್ದೇ ಸನ್ನಿವೇಶ ಇಸ್ರೇಲ್ ನದ್ದು.
ಈ ಸಂಪ್ರದಾಯವಾದಿ ಸಮುದಾಯಗಳಲ್ಲಿ ಈ ವೈರಸ್ ಇಸ್ರೇಲ್‌ನ ಬೇರೆಡೆಗಳಿಗಿಂತ ನಾಲ್ಕರಿಂದ ಎಂಟು ಪಟ್ಟು ವೇಗವಾಗಿ ಹರಡುತ್ತಿದೆಯಂತೆ. ಆತಂಕದ ಸಂಗತಿಯೆಂದರೆ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್ ನಗರದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 95ರಷ್ಟು ಮಂದಿ ಈ ಕಟ್ಟಾ ಸಂಪ್ರದಾಯವಾದಿಗಳು. ಅಲ್ಲಿಗೆ ಅಪಾಯದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಿ. ಕಳೆದ ಮೂರು ದಿನಗಳಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಶುಕ್ರವಾರ 267 ಪ್ರಕರಣಗಳಿದ್ದರೆ, ಸೋಮವಾರ
508ಕ್ಕೆ ಏರಿದೆ.
Related Articles
ಇಸ್ರೇಲ್‌ನ ಜನಸಂಖ್ಯೆಯಲ್ಲಿ ಈ ಸಂಪ್ರದಾಯವಾದಿಗಳ ಪಾಲು
ಶೇ. 12. ಆದರೆ ಅಲ್ಲಿನ 4 ಪ್ರಮುಖ ಆಸ್ಪತ್ರೆಗಳಲ್ಲಿರುವ ಕೋವಿಡ್ 19 ಸೋಂಕಿತರಲ್ಲಿ ಶೇ. 40ರಿಂದ ಶೇ. 60ರಷ್ಟು ಮಂದಿ ಈ ಸಂಪ್ರದಾ ಯವಾದಿಗಳೇ.
Advertisement
ಇಸ್ರೇಲ್‌ನಲ್ಲಿ ಈಗಾಗಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಅಗತ್ಯ ಸೇವೆಗಳ ಹೊರತಾಗಿ ಜನರು ಮನೆಯಲ್ಲೇ ಇರಬೇಕಿದೆ. ಪ್ರಾರ್ಥನೆ ಸೇರಿದಂತೆ ಗುಂಪು ಸೇರುವುದು, ಸಭೆ ಮಾಡುವುದನ್ನು ನಿಷೇಧಿಸಲಾಗಿದೆ.ಆದರೆ ಈ ಸಂಪ್ರದಾಯವಾದಿಗಳು, ಪ್ರಾರ್ಥನೆ ಮಾಡುವುದು, ಅಂತ್ಯಕ್ರಿಯೆಗಳು, ವಿವಾಹಗಳಂತಹ ಸಂಪ್ರದಾಯವನ್ನು ಯಾವುದೇ ನಿರ್ಬಂಧವನ್ನು ಲೆಕ್ಕಿಸದೇ ಅನುಸರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಇಂಥದೊಂದು ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗವಹಿಸಿದ್ದು ಸ್ಥಳೀಯರ ಟೀಕೆಗೆ ಗುರಿಯಾಗಿತ್ತು. ನಗರದ ಏಕೈಕ ಆಸ್ಪತ್ರೆಯ ಮಹಾನಿರ್ದೇಶಕ ಡಾ| ಮೋತಿ ರಾವಿಡ್ ಅವರು ನಿವಾಸಿಗಳನ್ನು ಸಮುದಾಯದಿಂದ ಕನಿಷ್ಠ ಒಂದು ವಾರದವರೆಗೆ ಹೊರಹೋಗದಂತೆ ಮನವಿ ಮಾಡಿದ್ದಾರೆ. ಇಂತಹ ಪ್ರಸಂಗಳು ಎದುರಾದರೆ ತಡೆಯುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ. ಈ ಕಟ್ಟಾ ಸಂಪ್ರದಾಯವಾದಿಗಳು ನೆಲೆಸಿರುವ ಪ್ರದೇಶದಲ್ಲಿ ಮಕ್ಕಳೇ ಹೆಚ್ಚು. ಬಳಿಕ ವೃದ್ಧರು. ಯುವಜನರ ಸಂಖ್ಯೆ ಕಡಿಮೆ. ಸೋಂಕು ಒಂದುವೇಳೆ ಕಾಳಿYಚ್ಚಿನಂತೆ ಹರಡಿಕೊಂಡರೆ ವೃದ್ಧರು ಸೇರಿದಂತೆ ಹಲವರು ಸಾಯಬಹುದು. ಈ ಆತಂಕ ಎಲ್ಲರನ್ನೂ ಕಾಡುತ್ತಿದೆ. ಒಟ್ಟಾರೆಯಾಗಿ ಇಸ್ರೇಲ್ ನಲ್ಲಿ ಕೋವಿಡ್ 19 ಮಣಿಸಲು ಕಟ್ಟಾ ಸಂಪ್ರದಾಯವಾದಿಗಳನ್ನು ಒಪ್ಪಿಸಲೇಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಈ ಒಪ್ಪಿಸುವುದರೊಳಗೆ ಅಪಾಯ ಒಳಗೆ ಬಂದು ಕುಳಿತುಕೊಳ್ಳುತ್ತದೋ ಎಂಬ ಆತಂಕ ಪ್ರಧಾನಿಯದ್ದಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಿಸಲಾಗಿದೆ.