ಗಾಜಾ: ಜನಪ್ರಿಯ ಇಸ್ರೇಲಿ ಟಿವಿ ಸರಣಿ ಫೌಡಾ ನಿರ್ಮಾಣ ತಂಡದ ಸದಸ್ಯ, , ಮತನ್ ಮೀರ್ ಎನ್ನುವವರು ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್ ವಿರುದ್ಧದ ಯುದ್ಧದ ಸಮಯದಲ್ಲಿ ನಿಧನ ಹೊಂದಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳ (IDF) 38 ವರ್ಷದ ಸಾರ್ಜೆಂಟ್ ಮೇಜರ್ ಜನರಲ್ (ರಿಸರ್ವಿಸ್ಟ್) ಮತನ್ ಮೀರ್, ಗಾಜಾದಲ್ಲಿ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಲ್ಲಿ ಪಟ್ಟಿಮಾಡಲಾಗಿದೆ ಎಂದು ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ಫೌಡಾ ಪಾತ್ರವರ್ಗವು ಮೀರ್ ಅವರ ಸಾವಿನ ಬಗ್ಗೆ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿ ಅವರು ತಮ್ಮ ತಂಡದ ಪ್ರಮುಖ ಭಾಗವಾಗಿದ್ದರು ಎಂದು ಹೇಳಿದ್ದಾರೆ.
ನಮ್ಮ ಫೌಡಾ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಮತನ್ ಮೀರ್ ಗಾಜಾದಲ್ಲಿ ಕೊನೆಯುಸಿರೆಳೆದರು ಎಂದು ಹಂಚಿಕೊಳ್ಳಲು ನಮ್ಮ ಮನಸ್ಸು ಛಿದ್ರಗೊಂಡಿದೆ. ಈ ದುರಂತದ ನಷ್ಟದಿಂದ ಚಿತ್ರತಂಡ ಮತ್ತುಸಿಬಂದಿ ಎದೆಗುಂದಿದ್ದಾರೆ. ಮತನ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವಿಟರ್‌ನಲ್ಲಿ ಎಕ್ಸ್‌ನಲ್ಲಿ ಫೌಡಾ ಪೋಸ್ಟ್ ಮಾಡಿದೆ.
ಹಮಾಸ್ ಉಗ್ರ ಸಂಘಟನೆ ಅಕ್ಟೋಬರ್ 7 ರಂದು ರಾಕೆಟ್ ದಾಳಿ ನಡೆಸಿ 1,400 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ನಂತರ ಗಾಜಾದಲ್ಲಿ ಇಸ್ರೇಲ್‌ನ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಮಾಸ್ ನಿಯಂತ್ರಿತ ಸರ್ಕಾರವು ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯಲ್ಲಿ ಮಕ್ಕಳೂ ಸೇರಿದಂತೆ 10,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.