ಜೆರುಸಲೇಂ: 1998ರಲ್ಲಿ ಆಫ್ರಿಕಾದಲ್ಲಿರುವ ಅಮೆರಿಕದ ಎರಡು ರಾಯಭಾರಿ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸುವ ಸಂಚಿಗೆ ನೆರವು ನೀಡಿದ್ದ ಮಾಸ್ಟರ್ ಮೈಂಡ್ ಅಲ್ ಖೈದಾ ಉಗ್ರಗಾಮಿ ಸಂಘಟನೆಯ ಎರಡನೇ ಮುಖ್ಯ ಕಮಾಂಡ್ ನನ್ನು ಅಮೆರಿಕದ ಅಣತಿ ಮೇರೆಗೆ ಆಗಸ್ಟ್ ನಲ್ಲಿ ರಹಸ್ಯವಾಗಿ ಹತ್ಯೆಗೈದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಆಗಸ್ಟ್ 7ರಂದು ಅಲ್ ಖೈದಾ ಎರಡನೇ ಮುಖಂಡ ಅಬ್ದುಲ್ಲಾ ಅಹ್ಮದ್ ಅಬ್ದುಲ್ಲಾ ಅಲಿಯಾಸ್ ಅಬು ಮುಹಮ್ಮದ್ ಮಸ್ರಿಯನ್ನು ಬೈಕ್ ನಲ್ಲಿ ಆಗಮಿಸಿದ್ದ ಇಸ್ರೇಲ್ ಗೂಢಚರರು ಹತ್ಯೆಗೈದಿರುವುದಾಗಿ ಮಾಧ್ಯಮದ ವರದಿ ಗುಪ್ತಚರ ಇಲಾಖೆಯ ಮಾಹಿತಿಯನ್ನಾಧರಿಸಿ ವರದಿ ಮಾಡಿರುವುದಾಗಿ ತಿಳಿಸಿದೆ. ಹತ್ಯೆಗೀಡಾಗಿರುವ ಮಸ್ರಿ ಅಲ್ ಖೈದಾ ಸಂಘಟನೆಯ ಮುಖಂಡನಾಗಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ. ಅಲ್ ಖೈದಾ ಸಂಘಟನೆಯ ಅಲ್ ಜವಾಹಿರಿ ಈವರೆಗೂ ರಹಸ್ಯವಾಗಿದ್ದ ಹಿನ್ನೆಲೆಯಲ್ಲಿ ಮಸ್ರಿಯನ್ನು ನಾಯಕನನ್ನಾಗಿ ಮಾಡಿರಬಹುದು ಎಂದು ವರದಿ ಹೇಳಿದೆ.
ಆದರೆ ಟೆಹ್ರಾನ್ ನಲ್ಲಿ ಇಸ್ರೇಲ್ ಏಜೆಂಟರು ಮುಹಮ್ಮದ್ ಮಸ್ರಿಯನ್ನು ಹತ್ಯೆಗೈದಿರುವ ವಿಚಾರದ ಬಗ್ಗೆ ಇರಾನ್ ಆಗಲಿ, ಅಲ್ ಖೈದಾ, ಅಮೆರಿಕ ಅಥವಾ ಇಸ್ರೇಲ್ ಯಾರೂ ಕೂಡಾ ಬಹಿರಂಗವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ.
ಇದನ್ನೂ ಓದಿ:ನಮ್ಮ ಬಳಿ ಹಣವಿಲ್ಲ, ಹೀಗಾಗಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ: ಸಾರಿಗೆ ಸಚಿವ ಸವದಿ
ಹೆಸರು ಹೇಳಲು ಇಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ರಾಯಿಟರ್ಸ್ ಗೆ, ಅಲ್ ಖೈದಾ ಮುಖಂಡನ ಹತ್ಯೆ ಕುರಿತಂತೆ ಯಾವುದೇ ವಿವರವಾಗಲಿ ಅಥವಾ ಘಟನೆಯನ್ನು ಖಚಿತಪಡಿಸುವುದಾಗಲಿ ಇಲ್ಲ ಎಂದು ತಿಳಿಸಿದ್ದಾರೆ.