Advertisement
ಆ ಪ್ರದೇಶದಲ್ಲಿರುವ ಸಶಸ್ತ್ರ ಮೂಲ ಸೌಕರ್ಯಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಗಳನ್ನು ಉಡಾಯಿಸುವ ಘಟಕಗಳನ್ನು ಧ್ವಂಸ ಗೊಳಿಸಲಾಗಿದೆ. ಅದಕ್ಕಾಗಿ ಅತ್ಯಾಧುನಿಕವಾಗಿರುವ ಯುದ್ಧ ಟ್ಯಾಂಕ್‌ಗಳನ್ನು ಬಳಸಲಾಗಿದೆ. ಯಾವುದೇ ಕ್ಷಣದಲ್ಲಿ ನಡೆಸಲಾಗುವ ಭೂ ದಾಳಿಗೆ ಇದೊಂದು ಪ್ರಾಯೋಗಿಕ ಅಭ್ಯಾಸ ಎಂದು ಬೆಂಜಮಿನ್ ನೆತನ್ಯಾಹು ಸರಕಾರ ಹೇಳಿಕೊಂಡಿದೆ.
Related Articles
Advertisement
ಇರಾನ್ ತರಬೇತಿ?ಘಾತಕ ದಾಳಿ ನಡೆಸುವ ನಿಟ್ಟಿನಲ್ಲಿ ಹಮಾಸ್ ಹಾಗೂ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಎಂಬ ಸಂಘಟನೆಗೆ ಇರಾನ್‌ನಿಂದಲೇ ತರಬೇತಿ ನೀಡಲಾಗಿತ್ತು ಎಂದು “ದ ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ. ಎರಡೂ ಸಂಘಟನೆಗಳ ಆಯ್ದ 500 ಮಂದಿಗೆ ಇರಾನ್‌ನಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು. ಅದಕ್ಕೆ ಇರಾನ್ ಸೇನೆ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ಸ್ (ಐಆರ್‌ಜಿಸಿ) ನೇತೃತ್ವ ವಹಿಸಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ದಿಢೀರ್ ದಾಳಿಗೆ ಕಾರಣ ಯಾರು ಎಂಬ ಪ್ರಶ್ನೆ ಮೂಡಿದ್ದಾಗಲೇ, ಇದಕ್ಕೆ ಇರಾನ್ ಕಾರಣ. ಆಗಸ್ಟ್‌ನಿಂದ ಈಚೆಗೆ ಎರಡೂ ಸಂಘಟನೆಗಳು ಭೂಮಿ, ವಾಯು ಮತ್ತು ಸಮುದ್ರದ ಮೂಲಕ ದಾಳಿಗೆ ಸರ್ವ ಸಿದ§ತೆಯನ್ನೂ ಮಾಡಿಕೊಂಡಿತ್ತು ಎಂದು ಪತ್ರಿಕೆ ಹೇಳಿಕೊಂಡಿದೆ. ಆದರೆ ಇದನ್ನು ಇರಾನ್ ಸರಾಸಗಟಾಗಿ ತಿರಸ್ಕರಿಸಿದೆ. 50 ಇಸ್ರೇಲಿ ಒತ್ತೆಯಾಳುಗಳ ಹತ್ಯೆ?
ಇದುವರೆಗೆ ಐವತ್ತು ಮಂದಿ ಇಸ್ರೇಲ್‌ನ ಒತ್ತೆಯಾಳುಗಳನ್ನು ಕೊಂದು ಹಾಕಿದ್ದೇವೆ ಎಂದು ಹಮಾಸ್ ಹೇಳಿಕೊಂಡಿದೆ. ಅ.7ರಂದು ಇಸ್ರೇಲ್ ವಿರುದ್ಧ ದಾಳಿ ನಡೆಸಿದ ದಿನದಿಂದ ಪ್ರತಿ ದಾಳಿ ಆರಂಭವಾಗಿತ್ತು. ಆ ದಿನದಿಂದಲೇ ಒತ್ತೆಯಾಳುಗಳ ಪೈಕಿ ಕೆಲವರನ್ನು ಕೊಲ್ಲಲಾಗಿದೆ ಎಂದು ಟೆಲಿಗ್ರಾಂ ಚಾನೆಲ್‌ನಲ್ಲಿ ಉಗ್ರ ಸಂಘಟನೆ ಅಪ್‌ಲೋಡ್ ಮಾಡಲಾಗಿರುವ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಯಾವುದೇ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ಸಂಘಟನೆಯ ಹೇಳಿಕೆಯನ್ನು ಪುಷ್ಟೀಕರಿಸಿಲ್ಲ.