Advertisement

ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಕೃಷಿ ಅಧ್ಯಯನ ಅಗತ್ಯ: ಸುನಿಲ್‌

12:30 AM Feb 10, 2019 | |

ಕಾರ್ಕಳ : ಸಮುದಾಯ ಆಧಾರಿತ ನೀರಾವರಿ ಯೋಜನೆ ಹಾಗೂ ಇಸ್ರೇಲ್‌ ತಂತ್ರಜ್ಞಾನ ಅಳವಡಿಸಿ ಕಾರ್ಕಳ ತಾಲೂಕಿನಲ್ಲಿ ಕೃಷಿ ಮಾಡುವ ನಿಟ್ಟಿನಲ್ಲಿ ಆಳವಾದ ಅಧ್ಯಯನ‌ದ ಅಗತ್ಯವಿದೆ. ಇಂತಹ ಪದ್ಧತಿಯ ಕೃಷಿಯಿಂದ ನಮ್ಮೂರಿನ ಕೃಷಿಕರಿಗೆ ಅನುಕೂಲವಾಗುವುದಾದರೆ ಇಸ್ರೇಲ್‌ ಮಾದರಿ ತಂತ್ರಜ್ಞಾನ ಅಳವಡಿಕೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಫೆ. 9ರಂದು ತಾ.ಪಂ. ಸಭಾಂಗಣದಲ್ಲಿ ನೀರಾವರಿ ಯೋಜನೆ ಕುರಿತು ರೈತರೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಕಾರ್ಕಳ ತಾಲೂಕಿನಲ್ಲಿ 29 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಲಭ್ಯವಿದೆ. ಆದರೆ ಕೇವಲ 9 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಕೃಷಿ ಕಾರ್ಯ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಖಾಲಿಯಿರುವ ಭೂಮಿಯಲ್ಲೂ ಕೃಷಿ ಮಾಡುವಂತಾಗಬೇಕು. ನೀರಾವರಿ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ 57 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎಂದರು.

ಎಣ್ಣೆಹೊಳೆ ಯೋಜನೆಗೆ 40 ಕೋಟಿ ರೂ.
ಎಣ್ಣೆಹೊಳೆ ಯೋಜನೆಗೆ ಅನುದಾನ ಒದಗಿಸಿ ಕೊಡುವಂತೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸರಕಾರದ ಗಮನ ಸೆಳೆಯುವ ಪ್ರಯತ್ನವಾಗಿದೆ. ಇದೀಗ ಬಜೆಟ್‌ನಲ್ಲಿ ಸಿಎಂ ಈ ಯೋಜನೆಗೆ 40 ಕೋಟಿ ರೂ. ಅನುದಾನ ನೀಡಿರು ವುದರಿಂದ ಈ ಭಾಗದ ಸಾಕಷ್ಟು ಕೃಷಿಕರಿಗೆ ಅನುಕೂಲ ವಾಗಲಿದೆ ಎಂದು ಶಾಸಕರು ಹೇಳಿದರು.

ಕಡ್ತಲ ಗ್ರಾ.ಪಂ. ಅಧ್ಯಕ್ಷ ಅರುಣ್‌ ಕುಮಾರ್‌ ಮಾತನಾಡಿ, ಶಾಸಕರ ಮುತುವರ್ಜಿಯಿಂದಾಗಿ ಎಣ್ಣೆ ಹೊಳೆ ಯೋಜನೆಗೆ ಸರಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಈ ಮೂಲಕ ಕಾರ್ಕಳದ ಬಹು ಬೇಡಿಕೆಯೊಂದು ಈಡೇರುತ್ತಿದೆ ಎಂದರು.

Advertisement

ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್‌. ಕೋಟ್ಯಾನ್‌, ಜಿ.ಪಂ. ಸದಸ್ಯರಾದ ದಿವ್ಯಾ ಜಿ. ಅಮೀನ್‌, ರೇಷ್ಮಾ ಉದಯ ಶೆಟ್ಟಿ, ಭಾರತೀಯ ಕಿಸಾನ್‌ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ. ಪೂಜಾರಿ, ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ, ಕೃಷಿ ಉಪ ನಿರ್ದೇಶಕ ಚಂದ್ರಶೇಖರ್‌, ಸಣ್ಣ ನೀರಾವರಿ ಇಲಾಖೆಯ ಎಇ ಪಾಲಣ್ಣ, ಜೈನ್‌ ನೀರಾವರಿ ಸಂಸ್ಥೆ ಇಂಜಿನೀಯರ್‌ ಡಾ| ಎ.ಜಿ. ಬಂಡಿ ಉಪಸ್ಥಿತರಿದ್ದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ, ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ನಿರೂಪಿಸಿ, ವಂದಿಸಿದರು.

ಪವರ್‌ ಪಾಯಿಂಟ್ ಪ್ರಸೆಂಟೇಷನ್‌ ಮೂಲಕ ಕೃಷಿಕರಿಗೆ ಇಸ್ರೇಲ್‌ ತಂತ್ರಜ್ಞಾನ ಕುರಿತಾಗಿ ಮಾಹಿತಿ ನೀಡಲಾಗುತಿತ್ತು. ಪರದೆಯ ಮೇಲೆ ಬಿತ್ತರಗೊಳ್ಳುತ್ತಿದ್ದ ಚಿತ್ರಕ್ಕೆ ಸಂಬಂಧಪಟ್ಟಂತೆ ನಿರೂಪಕರು ಇಂಗ್ಲಿಷ್‌ ಭಾಷೆಯಲ್ಲಿ ವಿವರಿಸುತ್ತಿದ್ದರು. ಅದನ್ನು ಮತ್ತೂಬ್ಬರು ಕನ್ನಡಕ್ಕೆ ಅನುವಾದಿಸುತ್ತಿದ್ದರು. ಆದರೆ, ಇಂಗ್ಲಿಷ್‌ ಭಾಷೆ ಇಲ್ಲಿ ಯಾಕೆ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.

Advertisement

Udayavani is now on Telegram. Click here to join our channel and stay updated with the latest news.

Next