Advertisement

Israel: ಮಧ್ಯಪ್ರಾಚ್ಯ ಕದನ; ಭಾರತ ಷೇರುಪೇಟೆಗೆ ಬಾಂಬ್‌

01:52 AM Oct 04, 2024 | |

ಮುಂಬಯಿ: ಇಸ್ರೇಲ್‌ ಮತ್ತು ಮಧ್ಯಪ್ರಾಚ್ಯದ ನಡುವೆ ನಡೆಯುತ್ತಿರುವ ಯುದ್ಧ ಷೇರುಪೇಟೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಭಾರತೀಯ ಷೇರು ಪೇಟೆ 2 ತಿಂಗಳ ಬಳಿಕ ಒಂದು ದಿನದಲ್ಲಿ ಗರಿಷ್ಠ ಕುಸಿತ ಕಂಡಿದ್ದರೆ, ವಿವಿಧ ದೇಶಗಳ ಷೇರುಪೇಟೆಗಳೂ ಕುಸಿದಿವೆ. ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆ ದಾರರಿಗೆ ಬರೋ ಬ್ಬರಿ 9.78 ಲಕ್ಷ ಕೋಟಿ ರೂ. ನಷ್ಟ ವುಂಟಾಗಿದೆ.

Advertisement

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬರೋಬ್ಬರಿ 1,769 ಅಂಕಗಳ ಕುಸಿತ ಕಂಡಿದ್ದು, 82,497 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇದು 3 ವಾರಗಳ ಕನಿಷ್ಠವಾಗಿದ್ದು, ಸೆ. 12ರಂದು ಸೆನ್ಸೆಕ್ಸ್‌ 82,962 ಅಂಕದಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಅಲ್ಲದೆ ಗುರುವಾರದ ಕುಸಿತ ಕಳೆದ 2 ತಿಂಗಳಲ್ಲೇ ಗರಿಷ್ಠ ಏಕದಿನದ ಕುಸಿತ ಎನಿಸಿಕೊಂಡಿದೆ. ನಿಫ್ಟಿ ಸಹ 546 ಅಂಕಗಳ ಕುಸಿತ ಕಂಡಿದ್ದು, 25250 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಸತತ 4ನೇ ದಿನವೂ ಷೇರುಪೇಟೆ ಇಳಿಕೆಯ ಹಾದಿಯಲ್ಲೇ ಮುಂದುವರಿದಿದ್ದು, ಇಸ್ರೇಲ್‌ ಮೇಲೆ ನಡೆದ ಇರಾನ್‌ನ ಖಂಡಾಂತರ ಕ್ಷಿಪಣಿ ದಾಳಿ ಜಗತ್ತಿನಲ್ಲಿ ಯುದ್ಧದ ಭೀತಿ ಹುಟ್ಟುಹಾಕಿರುವುದರಿಂದ ಹೂಡಿಕೆ ಹಿಂಪಡೆದ ಕಾರಣ ಷೇರುಪೇಟೆ ಕುಸಿದಿದೆ ಎಂದು ಜಿಯೋಜಿತ್‌ ಫೈನಾನ್ಸ್‌ ಹೇಳಿದೆ. ಅಲ್ಲದೆ ವಿದೇಶಿ ಬಂಡವಾಳ ಹಿಂದೆಗೆತ ಮತ್ತು ಕಚ್ಚಾತೈಲದ ಬೆಲೆ ಏರಿಕೆ ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಲವು ಷೇರುಗಳು ಇಳಿಕೆ
ಲಾರ್ಸನ್‌ ಆ್ಯಂಡ್‌ ಟಬೋì, ರಿಲಯೆನ್ಸ್‌ ಇಂಡಸ್ಟ್ರೀಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಏಷ್ಯನ್‌ ಪೇಂಟ್ಸ್‌, ಟಾಟಾ ಮೋಟರ್ಸ್‌, ಬಜಾಜ್‌ ಫೈನಾನ್ಸ್‌, ಮಾರುತಿ, ಬಜಾಜ್‌ ಫಿನ್‌ಸರ್ವ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಟೈಟಾನ್‌, ಅದಾನಿ ಪೋರ್ಟ್‌ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್‌ ಷೇರುಗಳು ಭಾರೀ ಕುಸಿತ ಕಂಡಿವೆ. ಬೃಹತ್‌ ಕಂಪೆನಿಗಳ ಪೈಕಿ ಜೆಎಸ್‌ಡಬ್ಲೂé ಸ್ಟೀಲ್‌ ಷೇರುಗಳು ಮಾತ್ರ ಏರಿಕೆ ಕಂಡಿವೆ.

ವಿದೇಶಿ ಷೇರುಪೇಟೆಗಳೂ ಕುಸಿತ
ಏಷ್ಯಾದ ಷೇರುಪೇಟೆಗಳ ಪೈಕಿ ಹಾಂಗ್‌ಕಾಂಗ್‌ ಷೇರುಪೇಟೆ ಕುಸಿತ ಕಂಡಿದೆ. ನಿಫ್ಟಿ ಕೊಂಚಮಟ್ಟಿನ ಏರಿಕೆ ಕಂಡಿದೆ. ಯುರೋಪ್‌ನ ಎಲ್ಲ ಷೇರುಪೇಟೆಗಳು ಕುಸಿತ ಕಂಡಿದ್ದರೆ, ಅಮೆರಿಕದ ಷೇರುಪೇಟೆ ಜಿಗಿದಿದೆ.

Advertisement

7 ಬಾರಿ 1,000 ಅಂಕ ಕುಸಿತ
ಭಾರತೀಯ ಷೇರುಪೇಟೆ ಸೂಚ್ಯಂಕ 2024ರಲ್ಲಿ 7 ಬಾರಿ 1,000 ಅಂಕಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾದಾಗ ಜೂ. 4ರಂದು ಸೆನ್ಸೆಕ್ಸ್‌ ಭರ್ಜರಿ 4,390 ಅಂಕ ಕುಸಿದಿತ್ತು. ಬಳಿಕ ಆ. 5ರಂದು 2,223 ಅಂಕ ಕುಸಿದಿತ್ತು. ಅಲ್ಲದೇ ಜ. 17, ಜ. 23, ಮೇ 9, ಸೆ.6 ಮತ್ತು ಸೆ. 30ರಂದು 1,000 ಅಂಕಕ್ಕಿಂತ ಹೆಚ್ಚು ಕುಸಿದಿತ್ತು.

ಇಸ್ರೇಲ್‌ ಸಂಘರ್ಷ: ಏನೇನಾಯ್ತು?
-ಟೆಲ್‌ಅವಿವ್‌ ಮೇಲೆ ಹೌತಿ ಬಂಡುಕೋರರ ದಾಳಿ
-ಇರಾಕ್‌ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಹೆಸರು
-ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿಗೆ 15 ಉಗ್ರರು ಸಾವು
-ಇಸ್ರೇಲ್‌ನಲ್ಲಿ ಇರಲು ಭಯ: ಭಾರತೀಯರ ಆತಂಕ

 

Advertisement

Udayavani is now on Telegram. Click here to join our channel and stay updated with the latest news.

Next