Advertisement
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1,769 ಅಂಕಗಳ ಕುಸಿತ ಕಂಡಿದ್ದು, 82,497 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇದು 3 ವಾರಗಳ ಕನಿಷ್ಠವಾಗಿದ್ದು, ಸೆ. 12ರಂದು ಸೆನ್ಸೆಕ್ಸ್ 82,962 ಅಂಕದಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಅಲ್ಲದೆ ಗುರುವಾರದ ಕುಸಿತ ಕಳೆದ 2 ತಿಂಗಳಲ್ಲೇ ಗರಿಷ್ಠ ಏಕದಿನದ ಕುಸಿತ ಎನಿಸಿಕೊಂಡಿದೆ. ನಿಫ್ಟಿ ಸಹ 546 ಅಂಕಗಳ ಕುಸಿತ ಕಂಡಿದ್ದು, 25250 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಲಾರ್ಸನ್ ಆ್ಯಂಡ್ ಟಬೋì, ರಿಲಯೆನ್ಸ್ ಇಂಡಸ್ಟ್ರೀಸ್, ಆ್ಯಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಟಾಟಾ ಮೋಟರ್ಸ್, ಬಜಾಜ್ ಫೈನಾನ್ಸ್, ಮಾರುತಿ, ಬಜಾಜ್ ಫಿನ್ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ಟೈಟಾನ್, ಅದಾನಿ ಪೋರ್ಟ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಭಾರೀ ಕುಸಿತ ಕಂಡಿವೆ. ಬೃಹತ್ ಕಂಪೆನಿಗಳ ಪೈಕಿ ಜೆಎಸ್ಡಬ್ಲೂé ಸ್ಟೀಲ್ ಷೇರುಗಳು ಮಾತ್ರ ಏರಿಕೆ ಕಂಡಿವೆ.
Related Articles
ಏಷ್ಯಾದ ಷೇರುಪೇಟೆಗಳ ಪೈಕಿ ಹಾಂಗ್ಕಾಂಗ್ ಷೇರುಪೇಟೆ ಕುಸಿತ ಕಂಡಿದೆ. ನಿಫ್ಟಿ ಕೊಂಚಮಟ್ಟಿನ ಏರಿಕೆ ಕಂಡಿದೆ. ಯುರೋಪ್ನ ಎಲ್ಲ ಷೇರುಪೇಟೆಗಳು ಕುಸಿತ ಕಂಡಿದ್ದರೆ, ಅಮೆರಿಕದ ಷೇರುಪೇಟೆ ಜಿಗಿದಿದೆ.
Advertisement
7 ಬಾರಿ 1,000 ಅಂಕ ಕುಸಿತಭಾರತೀಯ ಷೇರುಪೇಟೆ ಸೂಚ್ಯಂಕ 2024ರಲ್ಲಿ 7 ಬಾರಿ 1,000 ಅಂಕಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾದಾಗ ಜೂ. 4ರಂದು ಸೆನ್ಸೆಕ್ಸ್ ಭರ್ಜರಿ 4,390 ಅಂಕ ಕುಸಿದಿತ್ತು. ಬಳಿಕ ಆ. 5ರಂದು 2,223 ಅಂಕ ಕುಸಿದಿತ್ತು. ಅಲ್ಲದೇ ಜ. 17, ಜ. 23, ಮೇ 9, ಸೆ.6 ಮತ್ತು ಸೆ. 30ರಂದು 1,000 ಅಂಕಕ್ಕಿಂತ ಹೆಚ್ಚು ಕುಸಿದಿತ್ತು. ಇಸ್ರೇಲ್ ಸಂಘರ್ಷ: ಏನೇನಾಯ್ತು?
-ಟೆಲ್ಅವಿವ್ ಮೇಲೆ ಹೌತಿ ಬಂಡುಕೋರರ ದಾಳಿ
-ಇರಾಕ್ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಹೆಸರು
-ಲೆಬನಾನ್ನಲ್ಲಿ ಇಸ್ರೇಲ್ ದಾಳಿಗೆ 15 ಉಗ್ರರು ಸಾವು
-ಇಸ್ರೇಲ್ನಲ್ಲಿ ಇರಲು ಭಯ: ಭಾರತೀಯರ ಆತಂಕ