Advertisement

ಮತ್ತೆ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್

08:33 AM Jun 16, 2021 | Team Udayavani |

ಜೆರುಸಲೇಂ: ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್-ಗಾಜಾದಲ್ಲಿ ಇದೀಗ ಮತ್ತೆ ಯುದ್ದ ವಿಮಾನ ಹಾರಾಡಿದೆ. ಗಾಜಾದಲ್ಲಿನ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಬಲೂನುಗಳನ್ನು ಹಾರಿಸಿದ ಬಳಿಕ ಇಸ್ರೇಲ್ ಕೂಡಾ ಗಾಜಾ ಪಟ್ಟಿಯ ಮೇಲೆ  ವೈಮಾನಿಕ ದಾಳಿ ನಡೆಸಿದೆ.

Advertisement

ಮೇ 21ರಂದು ನಡೆದ ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ. ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ  ಕಾಳಗ ನಡೆದಿತ್ತು. ಇದರಲ್ಲಿ 260 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ  ಇಸ್ರೇಲ್ ಜನರು ಸಾವನ್ನಪ್ಪಿದ್ದರು.

ಪ್ಯಾಲೇಸ್ತೀನಿಯನ್ ಮೂಲಗಳ ಪ್ರಕಾರ, ಇಸ್ರೇಲ್ ನ ವಾಯುಪಡೆಯು ದಕ್ಷಿಣ ಗಾಜಾ ನಗರವಾದ ಖಾನ್ ಯೂನೆಸ್  ನ ಪೂರ್ವಕ್ಕೆ ಕನಿಷ್ಠ ಒಂದು ತಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ  ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಪ್ರತಿಯಾಗಿ, ಖಾನ್ ಯೂನೆಸ್‌ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next