Advertisement

ಕೋವಿಡ್ ಗೆ ಮದ್ದು ಅರೆಯುತ್ತಿರುವ ಇಸ್ರೇಲ್‌

11:48 AM May 06, 2020 | sudhir |

ಮಣಿಪಾಲ: ವಿಶ್ವಾದ್ಯಂತ ವಿಜ್ಞಾನಿಗಳು ಕೋವಿಡ್ ವೈರಸ್‌ಗೆ ಲಸಿಕೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಕಡೆಗಳಲ್ಲಿ ಲಸಿಕೆಯ ಟ್ರಯಲ್‌ ಕೂಡ ಆರಂಭವಾಗಿದೆ. ಕೊವಿಡ್‌ 19 ಗೆ ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು 100ಕ್ಕೂ ಅಧಿಕ ವ್ಯಾಕ್ಸಿನ್‌ಗಳು ಪ್ರಿಕ್ಲಿನಿಕಲ್‌ ಟ್ರಯಲ್‌ ಮೇಲಿವೆ. ಇಂಗ್ಲೆಂಡ್‌ ಮತ್ತು ಅಮೆರಿಕಾದಲ್ಲಿ ಪ್ರತಿಯೊಂದು ಲಸಿಕೆಯನ್ನು ಮಾನವರ ಮೇಲೆ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಕೂಡ ಯಾವುದೇ ಪ್ರಭಾವಿ ವ್ಯಾಕ್ಸಿನ್‌ ಸಿಕ್ಕಿಲ್ಲ. ಈ ನಡುವೆ ಇಸ್ರೇಲ್‌ ಒಂದು ದೊಡ್ಡ ಸುದ್ದಿಯೊಂದನ್ನು ಪ್ರಕಟಿಸಿದೆ. ಇಸ್ರೇಲ್ ಲಸಿಕೆ ತಯಾರಿಸಿದೆ ಎಂದಿದೆ. ವೈರಸ್‌ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೇಲ್‌ ಇನ್ಸ್ಟಿಟ್ಯೂಟ್‌ ಫಾರ್‌ ಬಯೋಲಾಜಿಕಲ್‌ ರಿಸರ್ಚ್‌ (ಐಐಬಿಆರ್‌) ಯಶಸ್ವಿಯಾಗಿದೆ ಎಂದು ಇಸ್ರೇಲ್‌ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಹೇಳಿದ್ದಾರೆ.

Advertisement

ಐಐಬಿಆರ್‌ ಅನ್ನು ಇಸ್ರೇಲ್‌ ನ ಗುಪ್ತಚರ ಲ್ಯಾಬ್‌ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಮಾಡಿದ ಪ್ರಯೋಗಗಳ ಬಗ್ಗೆ ಹೊರಗಿನ ಪ್ರಪಂಚಕ್ಕೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಇತ್ತೀಚೆಗೆ, ನಫ್ತಾಲಿ ಬೆನೆಟ್‌ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಈ ಲಸಿಕೆಗಾಗಿ ಇದೀಗ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next