Advertisement

Israel War; ‘ಇಸ್ರೇಲ್ ಮೊದಲ ಗುರಿ ಮಾತ್ರ…’: ಜಗತ್ತಿಗೆ ಹಮಾಸ್ ಕಮಾಂಡರ್ ಎಚ್ಚರಿಕೆ

03:02 PM Oct 12, 2023 | keerthan |

ಜೆರುಸಲೇಂ: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಅವರು ಜಗತ್ತಿಗೆ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಜಾಗತಿಕ ನಿಯಂತ್ರಣಕ್ಕಾಗಿ ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪಿನ ಮಹತ್ವಾಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದೆ. ತನಿಖಾ ಪತ್ರಕರ್ತೆ ಮತ್ತು RAIR ಫೌಂಡೇಶನ್‌ಗೆ ಸಂಬಂಧಿಸಿದ ಆಮಿ ಮೆಕ್‌ಗೆ ಸೇರಿದ X (ಟ್ವಿಟರ್) ನಲ್ಲಿ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.

Advertisement

“ಇಸ್ರೇಲ್ ಮೊದಲ ಗುರಿ ಮಾತ್ರ. ಇಡೀ ಗ್ರಹ ನಮ್ಮ ಆಳ್ವಿಕೆಗೆ ಒಳಪಡುತ್ತದೆ” ಎಂದು ಜಹರ್ ವೀಡಿಯೊದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಅನ್ಯಾಯ ಮತ್ತು ದಬ್ಬಾಳಿಕೆಯಿಲ್ಲದ ಜಗತ್ತಿಗೆ ತಮ್ಮ ದೃಷ್ಟಿಯನ್ನು ವಿವರಿಸಿದರು, ವಿವಿಧ ದೇಶಗಳಲ್ಲಿ ಪ್ಯಾಲೆಸ್ಟೀನಿಯನ್ನರು ಮತ್ತು ಅರಬ್ಬರನ್ನು ನಡೆಸಿಕೊಳ್ಳುವುದನ್ನು ಟೀಕಿಸಿದರು.

ಈ ಆತಂಕಕಾರಿ ವೀಡಿಯೊ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎಚ್ಚರಿಕೆ ನೀಡಿದ್ದಾರೆ. ಹಮಾಸ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ ಅವರು ಪ್ಯಾಲೇಸ್ಟಿನಿಯನ್ ಗುಂಪಿನ ಪ್ರತಿಯೊಬ್ಬ ಸದಸ್ಯರನ್ನು ಗುರಿಯಾಗಿಸಿದರು.

“ಹಮಾಸ್ ದಾಯೆಶ್‌ ಗೆ (ಇಸ್ಲಾಮಿಕ್ ಸ್ಟೇಟ್ ಗುಂಪು) ಸಮಾನವಾಗಿದೆ. ಜಗತ್ತು ದಾಯೆಶ್‌ ನೊಂದಿಗೆ ಮಾಡಿದಂತೆ ನಾವು ಅವರನ್ನು ಕೆಡವುತ್ತೇವೆ” ಎಂದು ನೆತನ್ಯಾಹು ದೂರದರ್ಶನದ ಭಾಷಣದಲ್ಲಿ ಎಚ್ಚರಿಸಿದರು.

Advertisement

ಗಾಜಾದಲ್ಲಿ ಇಸ್ರೇಲ್ ದಾಳಿ ಮುಂದುವರಿಸಿದರೆ ತಾವು ಒತ್ತೆಯಾಳಾಗಿ ಇರಿಸಿಕೊಂಡ ಜನರನ್ನು ಗಲ್ಲಿಗೇರಿಸುತ್ತೇವೆ ಎಂದು ಹಮಾಸ್ ಇದರ ನಡುವೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next