ಗಾಜಾ ಪಟ್ಟಿ: ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ದಾಳಿ ಮುನುವರೆಸಿದ್ದು ಅದರ ಮುಂದುವರೆದ ಭಾಗವಾಗಿ ಶನಿವಾರ ಮತ್ತೆ ವೈಮಾನಿಕ ದಾಳಿ ನಡೆಸಿದ್ದು ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಗಾಜಾದ ಮಾಘಜಿ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 51 ಪ್ಯಾಲೆಸ್ಟೀನಿಯಾದವರು ಹತ್ಯೆಯಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ದಾಳಿಯನ್ನು ನಡೆಸಿದ್ದು ಪರಿಣಾಮ ಹಲವಾರು ವಸತಿ ಗೃಹಗಳು ನಾಶವಾಗಿವೆ. ಹಮಾಸ್ ಬಂಡುಕೋರರು ಅಡಗಿರುವ ಅಡಗುತಾಣಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇಸ್ರೇಲ್ ಹಮಾಸ್ ನಡುವೆ ಸಂಘರ್ಷ ಆರಂಭಗೊಂಡು ಒಂದು ತಿಂಗಳು ಸಮೀಪಿಸುತ್ತಿದ್ದು ಇನ್ನೂ ಕೊನೆಗೊಳ್ಳುವ ಲಕ್ಷಣ ಕಾಣುತಿಲ್ಲ ಇದುವರೆಗೆ ಸಂಘರ್ಷದಲ್ಲಿ ಇದುವರೆಗೆ ಸುಮಾರು 9,400 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Uv Fusion: ಮಾತು ಮಾನವನಿಗೆ ಒಲಿದ ಅತ್ಯಮೂಲ್ಯ ಉಡುಗೊರೆ