Advertisement

Israel-Hamas war; ಕದನವಿರಾಮ ವಿಸ್ತರಣೆಗೆ ಚಿಂತನೆ

10:44 PM Nov 27, 2023 | Team Udayavani |

ಜೆರುಸಲೇಂ: ಹಮಾಸ್‌-ಇಸ್ರೇಲ್‌ ಸಂಘರ್ಷದ ಒತ್ತೆಯಾಳುಗಳ ಬಿಡುಗಡೆಯು 4ನೇ ಹಂತ ತಲುಪಿರುವಂತೆಯೇ ಉಭಯ ರಾಷ್ಟ್ರಗಳೆರಡೂ ಕದನವಿರಾಮವನ್ನು ಮತ್ತಷ್ಟು ವಿಸ್ತರಿಸುವತ್ತ ಚಿಂತನೆ ನಡೆಸಿವೆ.

Advertisement

ಈಜಿಪ್ಟ್, ಕತಾರ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೂ ಕೂಡ ಕದನವಿರಾಮ ವಿಸ್ತರಣೆಗೆ ಸಲಹೆ ನೀಡಿವೆ.

ಪ್ಯಾಲೇಸ್ತೀನ್‌ ವಿದೇಶಾಂಗ ಸಚಿವ ರಯೀದ್‌-ಅಲ್‌-ಮಲ್ಕಿ ಈ ಕುರಿತು ಮಾತನಾಡಿ ಸಂಘರ್ಷದಿಂದ ಈಗಾಗಲೇ ಸಾವಿನ ಸಂಖ್ಯೆ ವಿಪರೀತವಾಗಿದೆ. ಗಾಜಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ನಾಗರಿಕರ ಸಾವು ತಡೆಗಟ್ಟಲು ಸದ್ಯಕ್ಕಿರುವ ಕದನವಿರಾಮವನ್ನು ವಿಸ್ತರಿಸುವ ಅಗತ್ಯವಿದೆ ಎಂದಿದ್ದಾರೆ.

ಇತ್ತ ಇಸ್ರೇಲ್‌ ಕೂಡ ಬಿಡುಗಡೆಯಾಗಬೇಕಿರುವ ಒತ್ತೆಯಾಳುಗಳ ಪಟ್ಟಿಯೂ ತಯಾರಾಗುತ್ತಿರುವ ಹಿನ್ನೆಲೆ ಈ ಎಲ್ಲರೂ ಸುರಕ್ಷಿತವಾಗಿ ದೇಶಕ್ಕೆ ಮರಳುವವರೆಗೆ ಕದನವಿರಾಮ ವಿಸ್ತರಿಸುವುದು ಔಚಿತ್ಯವೆಂದು ಯೋಚಿಸುತ್ತಿದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಜೋರ್ಡನ್‌ ವಿದೇಶಾಂಗ ಸಚಿವರು ಕೂಡ ಇದೇ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next