Advertisement

Israel-Hamas ಯುದ್ಧ: ಗಾಜಾದಲ್ಲಿ 25,105 ಮಂದಿ ಸಾವು

09:33 PM Jan 21, 2024 | Team Udayavani |

ರಫಾಹ್‌: ಕಳೆದ ಮೂರು ತಿಂಗಳುಗಳಿಂದ ಇಸ್ರೇಲ್‌ ಪಡೆಗಳು ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ 25,105 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರೆ, 62,681 ಮಂದಿ ಗಾಯಗೊಂಡಿದ್ದಾರೆ. ಕಳೆದ 24 ತಾಸುಗಳ ಅವಧಿಯಲ್ಲಿ ಗಾಜಾದ ಆಸ್ಪತ್ರೆಗಳಿಗೆ ಕನಿಷ್ಠ 178 ಮೃತದೇಹಗಳನ್ನು ತರಲಾಗಿದ್ದರೆ, ಸುಮಾರು 300 ಮಂದಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಇದೇ ವೇಳೆ ಇಸ್ರೇಲ್‌-ಹಮಾಸ್‌ ಉಗ್ರರ ನಡುವಣ ಕಾದಾಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಕಳೆದ ವರ್ಷದ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಏಕಾಏಕಿ ಸರಣಿ ದಾಳಿ ನಡೆಸಿದ ಬಳಿಕ ಇತ್ತಂಡಗಳ ನಡುವೆ ಯುದ್ಧ ನಡೆಯುತ್ತಿದೆ. ಏತನ್ಮಧ್ಯೆ ಇಸ್ರೇಲ್‌ ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹಮಾಸ್‌ನ 9,000 ಉಗ್ರರನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದು, ಕಾರ್ಯಾಚರಣೆ ವೇಳೆ 195 ಮಂದಿ ಯೋಧರನ್ನು ಕಳೆದುಕೊಂಡಿರುವುದಾಗಿ ಹೇಳಿದೆ. ಹಮಾಸ್‌ ಉಗ್ರರು ಜನವಸತಿ ಪ್ರದೇಶಗಳನ್ನು ತಮ್ಮ ಆಡಗುದಾಣಗಳನ್ನಾಗಿಸಿಕೊಂಡುರುವುದರಿಂದಾಗಿ ನಾಗರಿಕರು ಸಾವನ್ನಪ್ಪುವಂತಾಗಿದೆ. ಅಮಾಯಕ ನಾಗರಿಕರ ಸಾವಿಗೆ ಹಮಾಸ್‌ ಉಗ್ರರೇ ಕಾರಣ ಎಂದು ದೂರಿದೆ.

 

Advertisement

Udayavani is now on Telegram. Click here to join our channel and stay updated with the latest news.

Next