Advertisement
ಇಸ್ರೇಲ್ ಮಾಧ್ಯಮಗಳ ವರದಿಗಳ ಪ್ರಕಾರ, ರಾಜತಾಂತ್ರಿಕ ಮಾತುಕತೆಯ ಫಲವಾಗಿ ಹಮಾಸ್ ಉಗ್ರರು ಒತ್ತೆಯಾಳಾಗಿಸಿಕೊಂಡಿರುವ ಇಸ್ರೇಲಿ ಗರನ್ನು ಬಿಡುಗಡೆಗೊಳಿಸುವುದು ಹಾಗೂ ಸಂಘ ರ್ಷದ ವೇಳೆ ಇಸ್ರೇಲ್ ಪಡೆಗಳು ಸೆರೆ ಹಿಡಿದಿರುವ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಗೊಳಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಕೆಲವು ಅಂತಿಮ ವಿವರಗಳನ್ನು ಸಿದ್ಧ ಪಡಿಸು ವುದು ಇನ್ನೂ ಬಾಕಿ ಉಳಿದಿರುವ ಕಾರಣ ಅಧಿಕಾರಿಗಳು ಶುಕ್ರ ವಾರಕ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
Related Articles
ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಹೆಜ್ಬುಲ್ಲಾದ ಐವರನ್ನು ಇಸ್ರೇಲ್ ಪಡೆಗಳು ಹೊಡೆದುರುಳಿಸಿವೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ, ಹೆಜ್ಬುಲ್ಲಾ ನಾಯಕ, ಲೆಬನಾನಿನ ಹಿರಿಯ ಸಂಸತ್ ಸದಸ್ಯನ ಮಗನೂ ಮೃತಪಟ್ಟಿದ್ದಾನೆಂದು ವರದಿಯಾಗಿದೆ.
Advertisement
ಹಮಾಸ್ ಬೆಂಬಲಿಗರ ನಿವಾಸಗಳ ಮೇಲೆ ಶೋಧ ಹಮಾಸ್ ಅನ್ನು ಜರ್ಮನಿ ಉಗ್ರಸಂಘಟನೆ ಎಂದು ಘೋಷಿಸಿದ್ದು, ರಾಷ್ಟ್ರದಲ್ಲಿ ಹಮಾಸ್‌ಗೆ ಬೆಂಬಲ ಸೂಚಿಸುವುದನ್ನು ನಿರ್ಬಂಧಿಸಿದೆ. ಏತನ್ಮಧ್ಯೆ ಗುಪ್ತಚರ ಮೂಲಗಳು ಜರ್ಮನಿಯಲ್ಲಿ 450ಕ್ಕೂ ಅಧಿಕ ಹಮಾಸ್ ಬೆಂಬಲಿಗರಿರುವ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜರ್ಮನಿಯ 300ಕ್ಕೂ ಅಧಿಕ ಪೊಲೀಸರು ಹಮಾಸ್ ಬೆಂಬಲಿಗರ ನಿವಾಸಗಳು, ಆಸ್ತಿಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಆರಂಭಿಸಿವೆ. ಬರ್ಲಿನ್‌ನಲ್ಲಿಯೇ 11 ಸ್ಥಳಗಳಲ್ಲಿ 15 ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವವರನ್ನು ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುದ್ಧ ನಿಲ್ಲದು, ವಿರಾಮ ಅಷ್ಟೇ!
ಕದನವಿರಾಮ ಘೋಷಿಸಿ, ಒತ್ತೆಯಾಳುಗಳ ಬಿಡುಗಡೆಯಾದ ಬಳಿಕ ಯುದ್ಧ ನಿಲ್ಲುತ್ತದೆಂದು ಎಲ್ಲರೂ ಭಾವಿಸಿರುವ ನಡುವೆಯೇ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಯುದ್ಧ ನಿಲ್ಲುವುದಿಲ್ಲ ಇದು ವಿರಾಮವಷ್ಟೇ ಎಂದಿದ್ದಾರೆ. ಅಲ್ಲದೇ, ಹಮಾಸ್‌ನ ನಾಯಕರು ಎಲ್ಲಿಯೇ ಇರಲಿ ಅವರನ್ನು ಪತ್ತೆಹಚ್ಚಿ ಗುರಿಯಾಗಿಸುವಂತೆ ಇಸ್ರೇಲಿನ ಬಲಿಷ್ಟ ಗುಪ್ತಚರ ಸಂಸ್ಥೆ ಮೊಸಾದ್‌ಗೂ ಆದೇಶಿಸಿದ್ದಾರೆ. ಹಮಾಸ್‌ನನ್ನು ಸಂಪೂರ್ಣ ಕಿತ್ತೂಗೆದ ಬಳಿಕವೇ ಇಸ್ರೇಲ್‌ನ ಕಾರ್ಯಾಚರಣೆ ನಿಲ್ಲುತ್ತದೆ ಎಂದು ಪತ್ರಿಕಾಗೋಷ್ಟಿಯಲ್ಲೂ ನೆತನ್ಯಾಹು ಹೇಳಿದ್ದಾರೆ.