ಜೆರುಸಲೇಂ: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರಿದಿರುವ ನಡುವೆಯೇ ಇಸೇಲ್ ಸೇನಾಪಡೆ ಖಾನ್ ಯೂನಿಸ್ ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನೌಕಾಪಡೆಯ ಮುಖ್ಯಸ್ಥ ಅಮರ್ ಅಬು ಜಲ್ಲಾಹ್ ಸಾವನ್ನಪ್ಪಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ಇದನ್ನೂ ಓದಿ:Embassy: ದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಿದ ಅಫ್ಘಾನಿಸ್ತಾನ… ಇಲ್ಲಿದೆ ಕಾರಣ
ಗಾಜಾಪಟ್ಟಿ ಸಂಘರ್ಷ ಆರಂಭಗೊಂಡ ನಂತರ ಅಬು ಜಲ್ಲಾಹ್ ಇಸ್ರೇಲ್ ವಿರುದ್ಧ ಹಲವಾರು ನೌಕಾಪಡೆ ಮೂಲಕ ದಾಳಿ ನಡೆಸುವ ನೇತೃತ್ವ ವಹಿಸಿದ್ದ, ಇದೀಗ ಜಲ್ಲಾಹ್ ಇಸ್ರೇಲ್ ದಾಳಿಯಲ್ಲಿ ಹತನಾಗಿರುವುದಾಗಿ ಹೇಳಿದೆ.
ಕರಾವಳಿ ಪ್ರದೇಶದ ಸಮೀಪ ಇದ್ದ ಹಮಾಸ್ ಆಸ್ತಿ-ಪಾಸ್ತಿಯನ್ನು ನಾಶಮಾಡಿರುವುದಾಗಿ ಇಸ್ರೇಲ್ ಪಡೆ ತಿಳಿಸಿದೆ. ಶಸ್ತ್ರಾಸ್ತ್ರ ಆಗರ, ಸುರಂಗ ಮಾರ್ಗಗಳು, ತರಬೇತಿ ಶಿಬಿರ, ವೀಕ್ಷಣಾಲಯ, ನೌಕಾ ನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿರುವುದಾಗಿ ವರದಿಯಾಗಿದೆ.
ಹಮಾಸ್ ನೌಕಾಪಡೆಯ ಪ್ರಾಬಲ್ಯವನ್ನು ಹತ್ತಿಕ್ಕುವ ಮುಖ್ಯ ಗುರಿಯೊಂದಿಗೆ ಇಸೇಲ್ ವೈಮಾನಿಕ ದಾಳಿ ನಡೆಸಿದ್ದು, ಹಮಾಸ್ ಉಗ್ರರ ದಾಳಿಯನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ.