ಜೆರುಸೆಲಮ್: ಇಸ್ರೇಲ್ ಹಮಾಸ್ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮದ ಒಪ್ಪಂದ ಮಾಡಲಾಗಿದ್ದು ಇದರೊಂದಿಗೆ ನಾಲ್ಕು ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದ್ದು. ಕದನ ವಿರಾಮಕ್ಕೆ ಬದಲಾಗಿ, ಹಮಾಸ್ ಮೊದಲ ಹಂತದಲ್ಲಿ 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದ್ದು ಈ ವೇಳೆ ಮಕ್ಕಳು ಮತ್ತು ಮಹಿಳೆಯರಿಗೆ ಮುಕ್ತಿ ಸಿಗಲಿದೆ ಎನ್ನಲಾಗಿದೆ.
ಒತ್ತೆಯಾಳುಗಳ ಮೊದಲ ಬಿಡುಗಡೆ ಗುರುವಾರ ನಡೆಯಲಿದೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದ ಇಸ್ರೇಲಿ ಸಚಿವರು ಹೇಳಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ಹಮಾಸ್ ವಿರುದ್ಧದ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಇಸ್ರೇಲ್ ನಾಲ್ಕು ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ, ಅಂತಿಮವಾಗಿ ಅಂತರರಾಷ್ಟ್ರೀಯ ಸಮುದಾಯದ ನಿರಂತರ ಒತ್ತಡದ ನಂತರ ಕದನ ವಿರಾಮಕ್ಕೆ ಇಸ್ರೇಲ್ ಮಣಿದಿದೆ.
ಹಮಾಸ್‌ನಿಂದ ಒತ್ತೆಯಾಳಾಗಿದ್ದ 50 ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಗೆ ಬದಲಾಗಿ 150 ಪ್ಯಾಲೇಸ್ಟಿನಿಯನ್ ಮಹಿಳಾ ಮತ್ತು ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮೂಲಕ ಇಸ್ರೇಲ್ ಸರ್ಕಾರ 4 ದಿನಗಳ ಕದನ ವಿರಾಮವನ್ನು ಅನುಮೋದಿಸಿದೆ.
ಯುದ್ಧದ ಅಂತ್ಯವಲ್ಲ…
ಈ ನಡುವೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ಮೊದಲ ಕದನವಿರಾಮ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: G20 Summit: ಇಂದು ಮೋದಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಜಿ20 ಶೃಂಗಸಭೆ… ವಿಶ್ವ ನಾಯಕರು ಭಾಗಿ