ಜೆರುಸಲೇಮ್/ ಗಾಜಾ: ಕಳೆದ 11 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕಾಳಗ ಅಂತ್ಯವಾಗಿದೆ. ಕದನ ವಿರಾಮ ಘೋಷಣೆಗೆ ಇಸ್ರೇಲ್ ನ ರಕ್ಷಣಾ ಸಂಪುಟ ಒಪ್ಪಿಗೆ ನೀಡಿದೆ.
ಸೆಕ್ಯುರಿಟಿ ಕ್ಯಾಬಿನೆಟ್ ಜತೆಗಿನ ತಡರಾತ್ರಿಯ ಸಭೆಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರ ಕಚೇರಿ ಕದನ ವಿರಾಮವನ್ನು ಘೋಷಣೆ ಮಾಡಿದೆ. ಈಜಿಪ್ಟಿನ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ತಿಳಿಸಿರುವ ಇಸ್ರೇಲ್, ಯಾವಾಗ ಕಾರ್ಯರೂಪಕ್ಕೆ ಬರಬೇಕೆಂದು ಎರಡು ಕಡೆಯವರು ಇನ್ನೂ ನಿರ್ಧರಿಸುತ್ತಿವೆ ಎಂದಿದೆ.
ಇಸ್ರೇಲ್ ನಿಂದ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಗಾಜಾ ಪಟ್ಟಿಯ ಜನರಲ್ಲಿ ಸಂಭ್ರಮ ಮನೆಮಾಡಿದೆ. ಕೆಲ ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡ ಬದುಕಿದ್ದ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕದನ ವಿರಾಮ ವಿಚಾರಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿರುವ ಹಮಾಸ್ ಉಗ್ರರು, ಇದು ಪ್ಯಾಲೆಸ್ತಿನ್ ಜನರ ಜಯ ಮತ್ತು ಇಸ್ರೇಲ್ ನ ಸೋಲು ಎಂದಿದೆ.
ಇದನ್ನೂಓದಿ:ಗಡಿಯಲ್ಲಿ ಹೈವೇ ನಿರ್ಮಿಸಿದ ಚೀನ
ಸಂಧಾನಕಾರರ ಮಾತನ್ನು ಕೇಳುವವರೆಗೂ ಜಾಗರೂಕರಾಗಿರುತ್ತಾರೆ ಎಂದು ಹಮಾಸ್‌ನ ಅರಬ್ ಮತ್ತು ಇಸ್ಲಾಮಿಕ್ ಸಂಬಂಧಗಳ ಬ್ಯೂರೋದ ಸದಸ್ಯ ಅಲಿ ಬರಾಕೆಹ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು. ಸಂಧಾನಕಾರರ ಮಾತಗಳನ್ನು ಕೇಳಿದ ನಂತರ, ಗುಂಪಿನ ನಾಯಕತ್ವವು ಚರ್ಚೆಗಳನ್ನು ನಡೆಸುತ್ತದೆ ಮತ್ತು ಪ್ರಕಟಣೆ ನೀಡುತ್ತದೆ ಎಂದು ಅಲಿ ಬರಾಕೆಹ್ ಹೇಳಿದರು.