Advertisement

ಅಂಗವೈಕಲ್ಯ ಮೀರಿನಿಂತ ಇಸ್ಮಾಯಿಲ್‌

12:09 PM Jul 26, 2018 | |

ಕೆ.ಆರ್‌.ಪುರ: ದೇಹದ ಎಲ್ಲ ಅಂಗಗಳು ಸರಿಯಿದ್ದರೂ ದುಡಿಯದೆ, ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವವರಿದ್ದಾರೆ. ಆದರೆ ಗುಂಡೇಟು ತಿಂದು, ಒಂದು ಕೈ ಊನವಾದರೂ, ಆಟೋ ಚಾಲನೆ ಮಾಡುತ್ತಾ ಬದುಕು ಸಾಗಿಸುತ್ತಿರುವ ಇಸ್ಮಾಯಿಲ್‌ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಅದು 1991ರಲ್ಲಿ ಕಾವೇರಿ ನೀರಿಗಾಗಿ ಮಂಡ್ಯದ ಪ್ಯಾಟ್ರೀ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ. ಹೋರಾಟದಲ್ಲಿ ಇಸ್ಮಾಯಿಲ್‌ ಕೂಡ ಭಾಗವಹಿಸಿದ್ದರು. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡೊಂದು ಇಸ್ಮಾಯಿಲ್‌ ಅವರ ಎಡ ಮೊಣಕೈ ಸೀಳಿತ್ತು.

ಅಂದಿನಿಂದ ಆ ಎಡಗೈ ಸ್ವಾ ಧೀನ ಕಳೆದುಕೊಂಡು, ಇಸ್ಮಾಯಿಲ್‌ ಶಾಶ್ವತ ವಿಕಲಚೇತನರಾದರು. ಘಟನೆ ನಂತರ ಸರ್ಕಾರ 12,500 ರೂ. ಪರಿಹಾರ ನೀಡಿತು. ಒಂದು ವರ್ಷದವರೆಗೆ ಬಂದ ಮಾಸಾಶನ ಮತ್ತೆ ಬರಲೇ ಇಲ್ಲ. ಆ ನಂತರ ಉದ್ಯೋಗ, ಪರಿಹಾರಕ್ಕಾಗಿ ಇಸ್ಮಾಯಿಲ್‌ ಪಟ್ಟ ಪಾಡು ಅಷ್ಟಿಷ್ಟಲ್ಲ.

ಘಟನೆ ನಂತರ ಗದ್ದುಗೆ ಏರಿದ ಎಲ್ಲ ಮುಖ್ಯಮಂತ್ರಿಗಳನ್ನೂ ಇಸ್ಮಾಯಿಲ್‌ ಭೇಟಿಯಾಗಿದ್ದಾರೆ. ಜನತಾ ದರ್ಶನದಲ್ಲಿ ಪಾಲ್ಗೊಂಡು “ನನಗೊಂದು ಕೆಲಸ ಕೊಡಿ’ ಎಂದು ಅಂಗಲಾಚಿದ್ದಾರೆ. ಆದರೆ ಸರ್ಕಾರ ತನ್ನಂತವರ ಮೇಲೆ ಕರುಣೆ ತೋರುವುದಿಲ್ಲ ಎಂದರಿತ ಇಸ್ಮಾಯಿಲ್‌, ಜೀವನ ನಿರ್ವಹಣೆಗೆ ಕಂಡುಕೊಂಡ ದಾರಿ ಆಟೋ ಚಾಲನೆ.

ಮೂಲತಃ ಮಂಡ್ಯದ ಗುತ್ತಲ ಕಾಲೋನಿಯ ಇಸ್ಮಾಯಿಲ್‌ಗೆ ಒಬ್ಬ ಮಗಳು, ಇಬ್ಬರೂ ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಕೆ.ಆರ್‌.ಪುರದ ಅಯ್ಯಪ್ಪನಗರದ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಿದೆ. ಅಂಗವೈಕಲ್ಯದ ನಡುವೆ ಆಟೋ ಓಡಿಸಿ ಬರುವ ಹಣದಲ್ಲಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಕಷ್ಟ. ಆದರೂ ಯಾರ ಮುಂದೂ ಕೈಚಾಚದೆ ಇಸ್ಮಾಯಿಲ್‌ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.

Advertisement

ಮಾಡಿದ ಕೆಲಸ ಒಂದೆರಡಲ್ಲ: ಗುಂಡೇಟಿನಿಂದ ಚೇತರಿಸಿಕೊಂಡ ಬಳಿಕ 1995ರಲ್ಲಿ ಕೆ.ಆರ್‌.ಪುರಕ್ಕೆ ಬಂದ ಇಸ್ಮಾಯಿಲ್‌, ಆರಂಭದಲ್ಲಿ ತರಕಾರಿ ವ್ಯಾಪಾರ ಮಾಡಿದರು. ನಂತರ ಬಟ್ಟೆಗಳ ಮಾರಾಟ, ಗಾರೆ ಕೆಲಸ, ಗ್ಯಾರೇಜ್‌ ಹೀಗೆ ಹತ್ತಾರು ಕೆಲಸಗಳನ್ನು ಮಾಡಿ, ಕೊನೆಗೆ ಮಾಡಿಫೈ ಮಾಡಿದ ಆಟೋ ಹ್ಯಾಂಡಲ್‌ ಹಿಡಿದಿದ್ದಾರೆ.
 
1994ರವರೆಗೆ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಂದ ಆರಂಭವಾಗಿ ಹಿಂದಿದ್ದ ಸಿಎಂ ಸಿದ್ದರಾಮಯ್ಯ ಅವರವರೆಗೆ ಎಲ್ಲರ ಜನತಾ ದರ್ಶನದಲ್ಲೂ ಕಷ್ಟ ಹೇಳಿಕೊಂಡಿದ್ದೇನೆ. ಆದರೆ ಪ್ರಯೋಜನವಾಗಿಲ್ಲ.
-ಇಸ್ಮಾಯಿಲ್‌

Advertisement

Udayavani is now on Telegram. Click here to join our channel and stay updated with the latest news.

Next