Advertisement

ದ್ವೀಪಗಳ ಹೆಸರು ಬದಲು

12:30 AM Dec 31, 2018 | |

ಕಾರ್‌ ನಿಕೋಬಾರ್‌/ಪೋರ್ಟ್‌ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ನ ಮೂರು ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಮರು ನಾಮಕರಣ ಮಾಡಿದ್ದಾರೆ. ನೇತಾಜಿ ಸುಭಾಶ್ಚಂದ್ರ ಬೋಸ್‌ ತ್ರಿವರ್ಣ ಧ್ವಜವನ್ನು ಹಾರಿಸಿ 75 ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರೋಸ್‌ ಐಲ್ಯಾಂಡ್‌ ದ್ವೀಪವನ್ನು ನೇತಾಜಿ ಸುಭಾಶ್ಚಂದ್ರ ಬೋಸ್‌ ದ್ವೀಪ, ನೀಲ್‌ ಐಲ್ಯಾಂಡ್‌ ಅನ್ನು ಶಹೀದ್‌ ದ್ವೀಪ, ಮತ್ತು ಹ್ಯಾವ್ಲಾಕ್‌ ದ್ವೀಪವನ್ನು ಸ್ವರಾಜ್‌ ದ್ವೀಪ ಎಂದು ಪ್ರಧಾನಿಯವರು ಹೊಸ ಹೆಸರಿನಿಂದ ಕರೆದಿದ್ದಾರೆ. ಇದರ ಜತೆಗೆ ವಿಶೇಷ ಅಂಚೆ ಚೀಟಿ, ಅಂಚೆ ಕವರ್‌, ಮತ್ತು 75 ರೂ. ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಬೋಸ್‌ ಹೆಸರಿನಲ್ಲಿ ಡೀಮ್ಡ್ ವಿವಿ ಆರಂಭ ಮಾಡುವ ಬಗ್ಗೆಯೂ ಅವರು ಪ್ರಕಟಿಸಿದ್ದಾರೆ.

Advertisement

ಶ್ಲಾಘನೆ: ಹದಿನಾಲ್ಕು ವರ್ಷಗಳ ಹಿಂದೆ ಅಂಡಮಾನ್‌-ನಿಕೋಬಾರ್‌  ದ್ವೀಪ ಸಮೂಹಕ್ಕೆ ಅಪ್ಪಳಿಸಿದ ಸುನಾಮಿಯ ಹೊರತಾಗಿಯೂ ಬುಡಕಟ್ಟು ಜನಾಂಗ ಅದನ್ನು ಎದುರಿಸಿ ನಿಂತದ್ದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾನುವಾರ ದ್ವೀಪ ಸಮೂಹಕ್ಕೆ ಭೇಟಿ ನೀಡಿ 2004ರ ದುರಂತ ದಲ್ಲಿ ಮಡಿದವರಿಗೆ ಗೌರವ ಅರ್ಪಿಸಿದರು. ಜತೆಗೆ ವಿವಿಧ ಅಭಿ ವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಕಾರ್‌ ನಿಕೋಬಾರ್‌ನ ಬಿಜೆಆರ್‌ ಸ್ಟೇಡಿಯಂನಲ್ಲಿ ಅವರು ಮಾತನಾಡಿದರು. 

ಬುಡಕಟ್ಟು ಜನಾಂಗದವರು ಅನುಸರಿಸುತ್ತಿರುವ ಕುಟುಂಬ ಪದ್ಧತಿ ಭಾರತದ ಇತರ ಭಾಗದವರಿಗೂ ಮಾದರಿ ಎಂದು ಪ್ರಧಾನಿ ಮೋದಿ ಕೊಂಡಾಡಿದರು. ಸಮುದ್ರ ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ತಡೆಗೋಡೆಯ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭ ವಾಗಲಿದೆ ಎಂದರು. 50 ಕೋಟಿ ರೂ. ಮೌಲ್ಯದ ಈ ಕಾಮಗಾರಿ ಶೀಘ್ರವೇ ಆರಂಭ ವಾಗಲಿದೆ ಎಂದಿದ್ದಾರೆ. 

ಗೌರವ ಅರ್ಪಣೆ: ಪೋರ್ಟ್‌ಬ್ಲೇರ್‌ನಲ್ಲಿರುವ ಸೆಲ್ಯುಲರ್‌ ಜೈಲಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಅರ್ಪಿಸಿದರು. ಜೈಲಿನ ಆವರಣದಲ್ಲಿರುವ ವೀರ್‌ ಸಾವರ್ಕರ್‌ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಜೈಲಿನ ಕೇಂದ್ರ ಭಾಗಕ್ಕೆ ತೆರಳಿದ ಅವರು, ಮಾರ್ಬಲ್‌ನಲ್ಲಿ ಕೆತ್ತಲಾಗಿರುವ ರಾಜಕೀಯ ಕೈದಿಗಳ ಹೆಸರುಗಳನ್ನು ಓದಿಕೊಂಡರು. 

ಋಣಾತ್ಮಕತೆ ಬದಲು ಧನಾತ್ಮಕತೆಯನ್ನು ಪಸರಿಸೋಣ
ಪಾಕ್ಷಿಕ ರೇಡಿಯೋ ಕಾರ್ಯಕ್ರಮ ಮನ್‌ಕಿ ಬಾತ್‌ನಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಋಣಾತ್ಮಕತೆಯನ್ನು ಪಸರಿಸುವುದು ಅತ್ಯಂತ ಸುಲಭ. ಆದರೆ ಅದನ್ನು ತಡೆದು, ಜನರು ಧನಾತ್ಮಕತೆಯನ್ನು ಪಸರಿಸಲು ಒಂದಾಗ ‌ಬೇಕಿದೆ ಎಂದಿದ್ದಾರೆ. ಜನರು ಒಟ್ಟಾರೆಯಾಗಿ ಶ್ರಮಿಸಿದ್ದರಿಂದಾಗಿ 2018ರಲ್ಲಿ ಬಹಳಷ್ಟು ಸಾಧನೆಯನ್ನು ನಾವು ಮಾಡಲು ಸಾಧ್ಯ ವಾಗಿದೆ ಎಂದಿದ್ದಾರೆ.

Advertisement

ಈ ವರ್ಷದ ಕೊನೆಯ ಮನ್‌ ಕಿ ಬಾತ್‌ ರೇಡಿಯೋ ಕಾರ್ಯಕ್ರಮ ಇದಾಗಿದೆ. 2019ರಲ್ಲೂ ಇದೇ ಪರಿಶ್ರಮ ಮತ್ತು ಪ್ರಗತಿ ಮುಂದುವರಿಯುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ. ಇದೇ ವೇಳೆ ಹಲವು ಧನಾತ್ಮಕ ಕಥೆಗಳನ್ನು ಬಿತ್ತರಿ ಸುವ ವೆಬ್‌ಸೈಟ್‌ಗಳ ಬಗ್ಗೆಯೂ ಮೋದಿ ಈ ವೇಳೆ ಮಾತ ನಾಡಿದ್ದಾರೆ. ಈ ವರ್ಷದಲ್ಲಿ ವಿದ್ಯುತ್‌ ಪ್ರತಿ ಗ್ರಾಮಕ್ಕೂ ತಲುಪಿದೆ. ಆಯುಷ್ಮಾನ್‌ ಭಾರತ ವಿಮೆ ಯೋಜನೆಯಿಂದ ದೇಶದ ಹಲವರಿಗೆ ಅನುಕೂಲವಾಗಿದೆ ಎಂದಿದ್ದಾರೆ. ಅಲ್ಲದೆ 2019ರಲ್ಲಿ ನಡೆಯಲಿರುವ ಕುಂಭ ಮೇಳದ ಬಗ್ಗೆಯೂ ಮಾತನಾಡಿದ ಅವರು, ಈ ಬಾರಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಕೆಂಪು ಕೋಟೆಯಲ್ಲಿ ಆಜಾದ್‌ ಹಿಂದ್‌ ಸರಕಾರರಚನೆಯ 75ನೇ ವರ್ಷಾಚರಣೆ ಪ್ರಯುಕ್ತ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಈ ಐತಿಹಾಸಿಕ ಸ್ಮಾರಕದಲ್ಲಿ ಇದುವರೆಗೆ ಸ್ವಾತಂತ್ರ್ಯ ದಿನಕ್ಕೆ ಮಾತ್ರ ರಾಷ್ಟ್ರಧ್ವಜ ಹಾರಿಸಲಾಗುತ್ತಿತ್ತು. ಮೊದಲ ಬಾರಿಗೆ ಈ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ ಎಂದರು. ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಗೌರ ವಾರ್ಥ ಗುಜರಾತ್‌ನ ಕೇವಡಿಯಾದಲ್ಲಿ ಏಕತಾ ಪ್ರತಿಮೆ ಸ್ಥಾಪಿಸಲಾಗಿದೆ ಎಂದೂ ವಿವರಿಸಿದ್ದಾರೆ ಪ್ರಧಾನಿ. 

Advertisement

Udayavani is now on Telegram. Click here to join our channel and stay updated with the latest news.

Next