Advertisement

ಹಿಜಾಬ್‌ ನೆಪದಲ್ಲಿ ಇಸ್ಲಾಮೀಕರಣ; ಪ್ರಮೋದ ಮುತಾಲಿಕ ಕಿಡಿ

06:02 PM Feb 11, 2022 | Team Udayavani |

ಹುಬ್ಬಳ್ಳಿ: ಹಿಜಾಬ್‌ ನೆಪದಲ್ಲಿ ಎಲ್ಲೆಡೆ ಇಸ್ಲಾಮೀಕರಣ ಯತ್ನ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತ ರೂಪದಲ್ಲಿ ಮುಂದಾಗಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

Advertisement

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಶಾಲೆಗಳಲ್ಲಿ ಹಿಜಾಬ್‌ ಗಾಗಿ ಯಾಕೆ ಒತ್ತಾಯ ವಿಷಯದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಜಾಬ್‌ ಪ್ರಕರಣದ ಹಿಂದೆ ಎಡಪಂಥಿಯರು ಹಾಗೂ ಮುಸ್ಲಿಂ ಮೂಲಭೂತವಾದಿಗಳಿದ್ದು, ಮಹಾರಾಷ್ಟ್ರದಲ್ಲಿ ಮೊದಲು ಇಸ್ಲಾಂ ನಂತರ ಶಿಕ್ಷಣ ಎಂಬ ಪೋಸ್ಟರ್‌ಗಳನ್ನು ಹಾಕಿದ್ದು ನೋಡಿದರೆ, ಇಸ್ಲಾಮೀಕರಣದ ಉದ್ದೇಶ ಸ್ಪಷ್ಟವಾಗುತ್ತದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗ ಒತ್ತಾಯಿಸುವವರು ಮುಂದೆ ಇನ್ನಷ್ಟು ಬೇಡಿಕೆಗಳನ್ನು ಇರಿಸುವುದರಲ್ಲಿ ಅನುಮಾನವಿಲ್ಲ. ಇಸ್ಲಾಮೀಕರಣಗೊಳಿಸುವ ಯತ್ನವನ್ನು ವಿಫಲಗೊಳಿಸಬೇಕು. ಎಲ್ಲ ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕೆಂದರು.

ಉದ್ಯಮಿ ಪ್ರಶಾಂತ ಸಂಬರಗಿ ಮಾತನಾಡಿ, ಹಿಜಾಬ್‌ ಪ್ರಕರಣ ಪೂರ್ವಯೋಜಿತ ಅಂತಾರಾಷ್ಟ್ರೀಯ ಸಂಚಾಗಿದೆ. ದೇಶದ ಕೆಲವರು ಸೇರಿದಂತೆ ವಿದೇಶದವರು ಇದರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದು ನೋಡಿದರೆ ಇದೊಂದು ಅಂತಾರಾಷ್ಟ್ರೀಯ ಕಾರ್ಯಸೂಚಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು. ದೆಹಲಿ ಹೈಕೋರ್ಟ್‌ ವಕೀಲರಾದ ವಿನಿತಾ ರಾಘವ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನಗೌಡ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next